‘ಪರ್ಯಾಯ ಇಂಧನ ಬಳಕೆ ಹೆಚ್ಚಳ’

ಗುರುವಾರ , ಜೂಲೈ 18, 2019
24 °C

‘ಪರ್ಯಾಯ ಇಂಧನ ಬಳಕೆ ಹೆಚ್ಚಳ’

Published:
Updated:
Prajavani

ಚೆನ್ನೈ: ’ಪೆಟ್ರೋಲ್‌ ಮತ್ತು ಡೀಸೆಲ್‌ಗಳಿಗೆ ಹಲವಾರು ಪರ್ಯಾಯ ಇಂಧನಗಳ ಬಳಕೆ ಹೆಚ್ಚುತ್ತಿದೆ’ ಎಂದು ಇಂಡಿಯನ್‌ ಆಯಿಲ್‌ನ ತಮಿಳನಾಡು ಮತ್ತು ಪುದುಚೇರಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ  ಪಿ. ಜಯದೇವನ್‌ ಹೇಳಿದ್ದಾರೆ.

‘ದೇಶಿ ತೈಲೋದ್ಯಮದಲ್ಲಿ ತಂತ್ರಜ್ಞಾನ ಬಳಕೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯ
ವಾಗಿ ಎಲ್‌ಎನ್‌ಜಿ, ಸಿಎನ್‌ಜಿ ಮತ್ತು ಪಿಎನ್‌ಜಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಗೆ ಬರಲಿವೆ.

‘ಸಂಸ್ಥೆಯು ಬಹು ಆಯ್ಕೆಯ ಡಿಜಿಟಲ್‌ ಪಾವತಿ, ತುರ್ತು ಸೇವೆಗೆ 1906 ಸಂಖ್ಯೆಗೆ ಚಾಲನೆ, ಬಳಕೆದಾರರು ಸೂಚಿಸಿದ ಸಮಯಕ್ಕೆ ಎಲ್‌ಪಿಜಿ ಸಿಲಿಂಡರ್‌ ಪೂರೈಕೆ, ಎಲ್‌ಪಿಜಿ ಸಂಪರ್ಕಕ್ಕೆ  ಆನ್‌ಲೈನ್‌ ನೋಂದಣಿ ಮತ್ತು ಪಾವತಿ, ಮೊಬೈಲ್‌ ಆ್ಯಪ್‌, 5 ಕೆಜಿ ಎಲ್‌ಪಿಜಿ ಮತ್ತು ಐರನ್‌ ಮತ್ತು ಲಾಂಡ್ರಿ  ವಲಯಕ್ಕೆ ಎಲ್‌ಪಿಜಿ ಬಾಕ್ಸ್‌ ಪೂರೈಕೆಯಂತಹ ವಿನೂತನ ಸೇವೆಗಳಿಗೆ ಚಾಲನೆ ನೀಡಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !