ಬೆಂಗಳೂರು: ಕೃಷಿ ತ್ಯಾಜ್ಯದಿಂದ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ–ರೂರ್ಕಿ) ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಅಮೆಜಾನ್ ಇಂಡಿಯಾ ತಿಳಿಸಿದೆ.

ಈ ಒಪ್ಪಂದದ ಭಾಗವಾಗಿ ನಡೆಯುವ ಸಂಶೋಧನೆಯು ಮರವನ್ನು ಬಳಸದೆ, ಕೃಷಿ ತ್ಯಾಜ್ಯವನ್ನು ಬಳಸಿ ಕಾಗದ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಇದರಿಂದಾಗಿ ಕೃಷಿ ತ್ಯಾಜ್ಯ ಸುಡುವುದು ತಪ್ಪುತ್ತದೆ. ಹಗುರವಾದ ಹಾಗೂ ಗಟ್ಟಿಮುಟ್ಟಾದ ಈ ಪ್ಯಾಕೇಜಿಂಗ್ ಸಾಮಗ್ರಿಗಳು, ಮರದ ತಿರುಳಿನಿಂದ ಸಿದ್ಧವಾಗುವ ಕಾಗದ ಅಥವಾ ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಳಕೆಯಾಗಲಿವೆ ಎಂದು ಅಮೆಜಾನ್ನ ಪ್ರಕಟಣೆ ತಿಳಿಸಿದೆ.

ಈ ಸಹಭಾಗಿತ್ವದ ಅಡಿಯಲ್ಲಿ ಪ್ರಯೋಗಾಲಯದಲ್ಲಿ ಈ ಕಾಗದವನ್ನು ಅಭಿವೃದ್ಧಿಪಡಿಸಲಾಗುತ್ತದೆ, ಇದನ್ನು 15 ತಿಂಗಳ ಕಾಲ ಪರೀಕ್ಷಿಸಲಾಗುತ್ತದೆ. ಈ ಉತ್ಪನ್ನಕ್ಕೆ ಸಂಬಂಧಿಸಿದ ಪರೀಕ್ಷೆಗಳು ಯಶಸ್ಸು ಕಂಡರೆ ಅಮೆಜಾನ್ ಕಂಪನಿಯು ಮುಂದಿನ ಹಂತದ ಬಳಕೆಗೆ ನೆರವು ಒದಗಿಸಲಿದೆ. ಇದರ ವಾಣಿಜ್ಯ ಉತ್ಪಾದನೆಯು ಮುಂದಿನ ವರ್ಷದ ಮಧ್ಯಭಾಗದಲ್ಲಿ ಅಥವಾ ಕೊನೆಯ ಭಾಗದಲ್ಲಿ ಆರಂಭವಾಗಬಹುದು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

‘ಭಾರತವು ವಾರ್ಷಿಕವಾಗಿ ಸುಮಾರು 500 ಮಿಲಿಯನ್ ಟನ್ ಕೃಷಿ ತ್ಯಾಜ್ಯ ಉತ್ಪಾದಿಸುತ್ತದೆ. ಇದನ್ನು ಪ್ಯಾಕೇಜಿಂಗ್ ಉದ್ದೇಶಗಳಿಗೆ ಮರುಬಳಕೆ ಮಾಡುವ ಮೂಲಕ ನಾವು ಸಾಂಪ್ರದಾಯಿಕ ಪ್ಯಾಕೇಜಿಂಗ್ ಸಾಮಗ್ರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದು ಅಮೆಜಾನ್ ಇಂಡಿಯಾದ ಕಾರ್ಯಾಚರಣೆಗಳ ವಿಭಾಗದ ಉಪಾಧ್ಯಕ್ಷ ಅಭಿನವ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.