ನವದೆಹಲಿ/ಅಹಮದಾಬಾದ್: ಹೈನುಗಾರಿಕಾ ಉತ್ಪನ್ನಗಳ ಸಂಸ್ಥೆ ಅಮೂಲ್‌ನ ಟ್ವಿಟರ್ ಖಾತೆ ಕೆಲ ಕಾಲ ಸ್ಥಗಿತಗೊಳಿಸಿ ಬಳಿಕ ಮರುಚಾಲನೆ ನೀಡಲಾಗಿದೆ.

ಜೂನ್ 4ರ ಸಂಜೆ ಅಮೂಲ್‌ನ ಟ್ವಿಟರ್ ಖಾತೆಸ್ಥಗಿತಗೊಂಡಿತ್ತು. ಮರುದಿನ ಬೆಳಗ್ಗೆ ಅದು ಮರುಚಾಲನೆಗೊಂಡಿದೆ.ಜೂನ್ 3ರಂದು ಅಮೂಲ್ ತನ್ನ ಟ್ವಿಟರ್ ಖಾತೆಯಲ್ಲಿ‘ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕುರಿತು’ಎಂಬ ಒಕ್ಕಣೆಯೊಂದಿಗೆ, ‘ಎಕ್ಸಿಟ್ ಡ್ರ್ಯಾಗನ್’ ಎಂಬ ಹೆಸರಿನಲ್ಲಿಜಾಹೀರಾತನ್ನು ಹಂಚಿಕೊಂಡಿತ್ತು. ‘ಅಮೂಲ್: ಮೇಡ್ ಇನ್ ಇಂಡಿಯಾ’ ಎಂದೂ ಆ ಜಾಹೀರಾತಿನಲ್ಲಿಉಲ್ಲೇಖಿಸಲಾಗಿತ್ತು. ಇದೇ ಕಾರಣಕ್ಕೆ ಅಮೂಲ್‌ನ ಟ್ವಿಟರ್ ಖಾತೆ ಬಂದ್ ಆಗಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಅಮೂಲ್‌ನ ಟ್ವಿಟರ್ ಖಾತೆ ಸ್ಥಗಿತ ಮತ್ತು ಮರುಚಾಲನೆ ವಿಚಾರದದಲ್ಲಿ ಟ್ವಿಟರ್ ನಡೆಗೆ ಭಾರಿ ಖಂಡನೆ ವ್ಯಕ್ತವಾಗಿದೆ.

ಟ್ವಿಟರ್ ಸ್ಪಷ್ಟನೆ:‘ಸುರಕ್ಷತಾ ಕಾರಣಗಳಿಂದಾಗಿ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಟ್ವಿಟರ್ ಶನಿವಾರ ಹೇಳಿದೆ. ಆದರೆ, ಚೀನಾ ವಿರುದ್ಧದ ಪೋಸ್ಟ್ ಕುರಿತ ಅಂಶಗಳನ್ನು ಅದು ಉಲ್ಲೇಖಿಸಿಲ್ಲ.

‘ಖಾತೆಗಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ಕೆಲವೊಮ್ಮೆ ಖಾತೆಗೆ ಸಂಬಂಧಿಸಿದಂತೆ ಅದರ ಮಾಲೀಕರಿಗೆ ಸರಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಾವು ತಿಳಿಸುತ್ತೇವೆ. ಅಧಿಕೃತ ಖಾತೆ ಮಾಲೀಕರಿಗೆ ಇದು ಕಷ್ಟವಲ್ಲ.ಸ್ಪ್ಯಾಮ್ ಅಥವಾ ದುರುದ್ದೇಶಪೂರಿತ ಖಾತೆ ಮಾಲೀಕರಿಗೆ ಅದು ಕಷ್ಟವಾಗಬಹುದು. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಖಾತೆ ಎಂದಿನಂತೇ ಆಗಲಿದೆ. ಖಾತೆಗಳನ್ನು ರಕ್ಷಿಸಲು, ಲಾಗಿನ್‌ಗಾಗಿ ನಾವು ಈ ಪರಿಶೀಲನೆಗಳನ್ನು ಖಾತೆ ಮಾಲೀಕರಿಂದ ವಾಡಿಕೆಯಂತೆ ಬಯಸುತ್ತೇವೆ,’ ಎಂದು ಟ್ವಿಟರ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟ್ವೀಟ್‌ಗೆ ಭಾರಿ ಮೆಚ್ಚುಗೆ

‘ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕುರಿತು’ಎಂಬ ಒಕ್ಕಣೆಯೊಂದಿಗೆ, ‘ಎಕ್ಸಿಟ್ ಡ್ರ್ಯಾಗನ್’ ಎಂಬ ಹೆಸರಿನಲ್ಲಿ ಅಮೂಲ್ ಮಾಡಿರುವ ಟ್ವೀಟ್ ಈಗ ಭಾರಿ ವೈರಲ್ ಆಗಿದೆ. ಈ ವರೆಗೆ ಅದನ್ನು 65.5 ಸಾವಿರ ಮಂದಿ ಲೈಕ್ ಮಾಡಿದ್ದರೆ, 33 ಸಾವಿರ ಮಂದಿ ರೀಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.