ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಧಾರಣೆ ಕುಸಿತ: ಗಜೇಂದ್ರಗಡ ಎಪಿಎಂಸಿಗೆ ನಿತ್ಯ 3ರಿಂದ 4 ಸಾವಿರ ಚೀಲ ಆವಕ

Published 19 ಜನವರಿ 2024, 19:50 IST
Last Updated 19 ಜನವರಿ 2024, 19:50 IST
ಅಕ್ಷರ ಗಾತ್ರ

ಗಜೇಂದ್ರಗಡ (ಗದಗ ಜಿಲ್ಲೆ): ಮಾರುಕಟ್ಟೆಯಲ್ಲಿ ದಿನೇ ದಿನೇ ದರ ಕುಸಿಯುತ್ತಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗಾರರು ಕಂಗಾಲಾಗಿದ್ದಾರೆ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 20 ದಿನಗಳ ಹಿಂದೆ ಒಂದು ಕ್ವಿಂಟಲ್ ಹಸಿ ಶೇಂಗಾ ದರ ₹5,000ರಿಂದ ₹5,600 ಹಾಗೂ ಒಣ ಶೇಂಗಾಕ್ಕೆ ₹8,600ರಿಂದ ₹9,000 ಧಾರಣೆ ಇತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಒಂದು ಕ್ವಿಂಟಲ್‌ ಹಸಿ ಶೇಂಗಾಕ್ಕೆ ₹3,009ರಿಂದ ₹4,600 ಮತ್ತು ಒಣ ಶೇಂಗಾ ದರ ₹6,600ರಿಂದ ₹7,859ಕ್ಕೆ ಕುಸಿದಿದೆ.

ಎಪಿಎಂಸಿಗೆ ಗದಗ ಜಿಲ್ಲೆಯ ರೈತರು ಸೇರಿದಂತೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ತಾಲ್ಲೂಕು, ಬಾಗಲಕೋಟಿ ಜಿಲ್ಲೆಯ ಬಾದಾಮಿ, ಹುನಗುಂದ ತಾಲ್ಲೂಕಿನ ರೈತರು ಶೇಂಗಾವನ್ನು ಮಾರಾಟಕ್ಕೆ ತರುತ್ತಾರೆ. ಪ್ರತಿದಿನ 3ರಿಂದ 4 ಸಾವಿರ ಚೀಲ ಆವಕ ಆಗುತ್ತಿದೆ. ಒಂದು ಚೀಲ ಹಸಿ ಶೇಂಗಾವು 50ರಿಂದ 60 ಕೆ.ಜಿ, ಒಣ ಶೇಂಗಾ 35 ಕೆ.ಜಿ ಇರುತ್ತದೆ. 

ಎಪಿಎಂಸಿಯಲ್ಲಿ ಮೇ ತಿಂಗಳವರೆಗೂ ಶೇಂಗಾ ಆವಕವಾಗುತ್ತದೆ. ಸ್ಥಳೀಯವಾಗಿ 12 ಮಂದಿ ಖರೀದಿದಾರರಿದ್ದಾರೆ. ಗದಗ, ಇಳಕಲ್‌ ಮತ್ತು ರಾಮದುರ್ಗದಿಂದಲೂ ಖರೀದಿದಾರರು ಬರುತ್ತಾರೆ.

‘ಕಳೆದ ವರ್ಷ ಮುಂಗಾರು ವೈಫಲ್ಯದಿಂದ ಫಸಲು ಹಾಳಾಯಿತು. ಈ ಬಾರಿ ಕೊಳವೆಬಾವಿ ಆಶ್ರಯದಲ್ಲಿ ಶೇಂಗಾ ಬೆಳೆದಿದ್ದೆ. ದನ-ಕರುಗಳಿಗೆ
ಮೇವು, ಕೈಗೊಂದಿಷ್ಟು ಹಣ ಸಿಗುವ ಭರವಸೆ ಇತ್ತು. ಮಾರಾಟಕ್ಕಾಗಿ ಎಪಿಎಂಸಿಗೆ 87 ಚೀಲ ಹಸಿ ಶೇಂಗಾ ತಂದಿದ್ದೆ. ಹಿಂದಿನ ವಾರಗಳಲ್ಲಿದ್ದ ದರಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಲ್‌ಗೆ 

ಕೊಯ್ಲಿನ ಆರಂಭದಲ್ಲಿ ಶೇಂಗಾ ಆವಕ ಕಡಿಮೆಯಿತ್ತು. ಹಾಗಾಗಿ, ಖರೀದಿದಾರರು ಹೆಚ್ಚು ದರ ನೀಡಿದ್ದರು. ಈಗ ಆವಕ ಹೆಚ್ಚಾಗಿದೆ. ಹಾಗಾಗಿ, ಬೆಲೆ ಕುಸಿದಿದೆ
–ಅಮರೇಶ ಬಳಿಗೇರ, ಅಧ್ಯಕ್ಷ, ಎಪಿಎಂಸಿ ವರ್ತಕರ ಸಂಘ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT