ಮಂಗಳವಾರ, ಮಾರ್ಚ್ 28, 2023
25 °C
ದೇಶದ ನಂಬರ್ 2 ಶ್ರೀಮಂತನ ಸೊಸೆಯಾಗಿ ಬರುವ ರಾಧಿಕಾ ಯಾರು?

ಅಂಬಾನಿ ಪುತ್ರ ಅನಂತ್‌ರನ್ನು ವರಿಸುತ್ತಿರುವ ರಾಧಿಕಾ ಮರ್ಚೆಂಟ್‌ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ ಅವರು, ಇಂದು ರಾಧಿಕಾ ಮರ್ಚೆಂಟ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ವಿವಾಹ ದಿನ ಇನ್ನಷ್ಟೇ ಘೋಷಣೆಯಾಗಬೇಕಿದೆ. ಹಾಗಾದರೆ ಯಾರಿದು ರಾಧಿಕಾ ಮರ್ಚೆಂಟ್‌? ಸಣ್ಣ ಪರಿಚಯ ಇಲ್ಲಿದೆ.

1. ಎನ್‌ಕೋರ್‌ ಹೆಲ್ತ್‌ಕೇರ್‌ನ ಸಿಇಒ ವಿರೇನ್‌ ಮರ್ಚೆಂಟ್‌ ಹಾಗೂ ಶೈಲಾ ಮರ್ಚೆಂಟ್‌ ಅವರ ಪುತ್ರಿಯೇ ರಾಧಿಕಾ ಮರ್ಚೆಂಟ್‌

2. ರಾಧಿಕಾ ಅವರು ನ್ಯೂಯಾರ್ಕ್‌ ವಿಶ್ವವಿದ್ಯಾಲಯದಿಂದ ರಾಜಕೀಯ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

3. ಖಾಸಗಿ ಐಷಾರಿ ವಿಲ್ಲಾ ನೆಟ್ವರ್ಕ್‌ ‘ಇಸ್ಪ್ರವಾ‘ದಲ್ಲಿ, ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿ 2017ರಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದರು.

4. ಸದ್ಯ ರಾಧಿಕಾ ಮರ್ಚೆಂಟ್‌ ಅವರು ಎನ್‌ಕೋರ್‌ ಹೆಲ್ತ್‌ಕೇರ್‌ನ ನಿರ್ದೇಶಕಿಯಾಗಿದ್ದಾರೆ.

5. 24 ವರ್ಷದ ರಾಧಿಕಾ ಭರತನಾಟ್ಯಪಟುವಾಗಿದ್ದು, ‘ಅರಂಗೇಟ್ರಂ‘  ಕಾರ್ಯಕ್ರಮವನ್ನು ಮುಂಬೈನ ಜಿಯೋ ವರ್ಲ್ಡ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು. ನೃತ್ಯ ತರಬೇತಿ ಪಡೆದ ಬಳಿಕ ಮೊದಲ ವೇದಿಕೆ ಕಾರ್ಯಕ್ರಮ ನೀಡುವುದಕ್ಕೂ ಮೊದಲು ಮಾಡುವ ಸಾಂಸ್ಕೃತಿಕ ಕಾರ್ಯಕ್ರಮವೇ ಅರಂಗೇಟ್ರಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು