ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಆ್ಯಪಲ್‌ನಿಂದ 15 ಮಹಡಿಗಳ ಹೊಸ ಕಚೇರಿ ಪ್ರಾರಂಭ

Published 17 ಜನವರಿ 2024, 10:04 IST
Last Updated 17 ಜನವರಿ 2024, 10:04 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ತಂತ್ರಜ್ಞಾನ ದಿಗ್ಗಜ ಆ್ಯಪಲ್ ಕಂಪನಿಯು ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಕರ್ಯಗಳುಳ್ಳ 15 ಮಹಡಿಗಳ ಹೊಸ ಕಚೇರಿಯನ್ನು ತೆರೆದಿದೆ.

ನಗರದ ಹೃದಯಭಾಗವಾದ ಮಿನ್‌ಸ್ಕ್ ವೃತ್ತದಲ್ಲಿ ಆ್ಯಪಲ್‌ನ ಹೊಸ ಕಚೇರಿ ತೆರೆಯಲಾಗಿದ್ದು, ವಿಧಾನಸೌಧ, ಹೈಕೋರ್ಟ್, ಕೇಂದ್ರ ಗ್ರಂಥಾಲಯ, ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ, ಕಬ್ಬನ್ ಪಾರ್ಕ್ ಮುಂತಾದವುಗಳಿಗೆ ಹಾಗೂ ಕಬ್ಬನ್ ಪಾರ್ಕ್ ಮೆಟ್ರೊ ರೈಲ್ವೇ ಸ್ಟೇಶನ್‌ಗೂ ಸಮೀಪದಲ್ಲಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿ ಆ್ಯಪಲ್‌ನ ಮೊದಲ ಕಚೇರಿ ಈಗಾಗಲೇ ಕಾರ್ಯಾಚರಿಸುತ್ತಿದೆ.

ಭಾರತದಲ್ಲಿ ಕಾರ್ಯಾಚರಣೆ ವಿಸ್ತರಿಸುವ ನಿಟ್ಟಿನಲ್ಲಿ ಆ್ಯಪಲ್ ವಿನೂತನ ಹೆಜ್ಜೆ ಇರಿಸಿದ್ದು, ಈ ಹೊಸ ಕಟ್ಟಡದಲ್ಲಿ 1,200 ಉದ್ಯೋಗಿಗಳಿಗೆ ಸ್ಥಳಾವಕಾಶವಿದೆ. 15 ಮಹಡಿಗಳ ಈ ಕಟ್ಟಡದಲ್ಲಿ ಕಾರ್ಬನ್ ನ್ಯೂಟ್ರಲ್ (ಕನಿಷ್ಠ ಇಂಗಾಲ ಹೊರಸೂಸುವಿಕೆ) ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಭಾರತದಲ್ಲಿ ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಆ್ಯಪಲ್, ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಗುರುಗ್ರಾಮಗಳಲ್ಲಿ ಈಗಾಗಲೇ ಕಾರ್ಪೊರೇಟ್ ಕಚೇರಿಗಳನ್ನು ಹೊಂದಿದ್ದು, ಈ ಅತ್ಯಾಧುನಿಕ ಕಚೇರಿಯು ಹೊಸ ಸೇರ್ಪಡೆಯಾಗಿದೆ.

ಭಾರತದಲ್ಲಿ ಈಗಾಗಲೇ ಸುಮಾರು 3,000 ಉದ್ಯೋಗಿಗಳನ್ನು ಆ್ಯಪಲ್ ಹೊಂದಿದ್ದು, ಮರುಬಳಕೆಯ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT