ಸೋಮವಾರ, ಜೂನ್ 21, 2021
29 °C

ದೇಶದಲ್ಲೇ ಮೊಬೈಲ್‌ ತಯಾರಿಕೆಗೆ ಆಸಕ್ತಿ: ₹ 11 ಲಕ್ಷ ಕೋಟಿ ಮೌಲ್ಯದ ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಆ್ಯಪಲ್‌, ಸ್ಯಾಮ್ಸಂಗ್‌ ಸೇರಿದಂತೆ ಒಟ್ಟಾರೆ 22 ಕಂಪನಿಗಳು ದೇಶದಲ್ಲಿಯೇ 5 ವರ್ಷಗಳಲ್ಲಿ ₹ 11 ಲಕ್ಷ ಕೋಟಿ ಮೌಲ್ಯದ ಮೊಬೈಲ್‌ ತಯಾರಿಸುವ ಪ್ರಸ್ತಾವವನ್ನು ಮುಂದಿಟ್ಟಿವೆ’ ಎಂದು ಕೇಂದ್ರ ದೂರಸಂಪರ್ಕ ಮತ್ತು ಐ.ಟಿ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

‘ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ತಯಾರಿಕೆ ಹೆಚ್ಚಿಸಲು ಜಾರಿಗೊಳಿಸಿರುವ ₹ 41 ಸಾವಿರ ಕೋಟಿ ಮೊತ್ತದ  ಉತ್ಪಾದನೆ ಸಂಪರ್ಕಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಈ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಚೀನಾದ ಯಾವುದೇ ಕಂಪನಿಯಿಂದ ಅರ್ಜಿ ಸಲ್ಲಿಕೆಯಾಗಿಲ್ಲ‘ ಎಂದು ಮಾಹಿತಿ ನೀಡಿದ್ದಾರೆ.

ಇದರಿಂದ ₹ 7 ಲಕ್ಷ ಕೋಟಿ ಮೊತ್ತದ ರಫ್ತು ಸಾಧ್ಯವಾಗಲಿದ್ದು, 12 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಮಾಡಲಾಗಿದೆ. ಮನವಿ ಸಲ್ಲಿಸಿರುವ ಎಲ್ಲಾ ಕಂಪನಗಳಿಗೂ ವೈಯಕ್ತಿಕವಾಗಿ ಧನ್ಯವಾದ’ ಎಂದು ಅವರು ಹೇಳಿದ್ದಾರೆ.

‘ತೈವಾನ್‌, ದಕ್ಷಿಣ ಕೊರಿಯಾ, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ಕಂಪನಿಗಳು ಅರ್ಜಿ ಸಲ್ಲಿಸಿವೆ. ಕಂಪನಿಗಳ ಪ್ರಸ್ತಾವನೆಗೆ ಒಪ್ಪಿಗೆ ದೊರೆತ ಬಳಿಕ ಸಾವಿರಾರು ಕೋಟಿ ಹೂಡಿಕೆ ಮಾಡಲಿವೆ.

‘ವಿದೇಶಿ ಕಂಪನಿಗಳು ₹ 15 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಫೋನ್‌ಗಳನ್ನು ಮಾತ್ರವೇ ತಯಾರಿಸಲಬೇಕು. ದೇಶಿ ಕಂಪನಿಗಳಿಗೆ ಇಂತಹ ಯಾವುದೇ ಮಿತಿ ಇರುವುದಿಲ್ಲ’ ಎಂದಿದ್ದಾರೆ.

ವಿದೇಶಿ ಕಂಪನಿಗಳು: ಸ್ಯಾಮ್ಸಂಗ್‌, ಫಾಕ್ಸ್‌ಕಾನ್‌, ರೈಸಿಂಗ್‌ ಸ್ಟಾರ್‌, ವಿಸ್ಟ್ರನ್‌, ಪೆಗಟ್ರಾನ್‌

ದೇಶಿ ಕಂಪನಿಗಳು: ಲಾವಾ, ಡಿಕ್ಸನ್‌ ಟೆಕ್ನಾಲಜೀಸ್‌, ಮೈಕ್ರೊಮ್ಯಾಕ್ಸ್‌, ಪೆಡ್‌ಗೆಟ್‌ ಎಲೆಕ್ಟ್ರಾನಿಕ್ಸ್‌, ಆಪ್ಟಿಮಸ್‌ ಎಲೆಕ್ಟ್ರಾನಿಕ್ಸ್‌

5 ವರ್ಷಗಳಲ್ಲಿ ತಯಾರಿಕೆ

₹ 9 ಲಕ್ಷ ಕೋಟಿ

₹ 15 ಸಾವಿರಕ್ಕಿಂತ ಅಧಿಕ ಬೆಲೆಯ ಫೋನ್‌ಗಳ ಒಟ್ಟಾರೆ ಮೌಲ್ಯ

₹ 2 ಲಕ್ಷ ಕೋಟಿ

₹ 15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳ ಒಟ್ಟಾರೆ ಮೌಲ್ಯ

ಉದ್ಯೋಗ ಸೃಷ್ಟಿ ನಿರೀಕ್ಷೆ

3 ಲಕ್ಷ- ನೇರ

9 ಲಕ್ಷ- ಪರೋಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು