ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಇಂಧನ ದರ ಶೇ 5.3ರಷ್ಟು ಏರಿಕೆ

Last Updated 16 ಮೇ 2022, 14:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಮಾನ ಇಂಧನ ದರವನ್ನು ಸೋಮವಾರ ಶೇಕಡ 5.3ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಈ ವರ್ಷದಲ್ಲಿ ವಿಮಾನ ಇಂಧನ (ಎಟಿಎಫ್) ದರವು 10 ಬಾರಿ ಹೆಚ್ಚಳ ಆದಂತಾಗಿದೆ.

ಎಟಿಎಫ್‌ ದರವನ್ನು ಕಿಲೋ ಲೀಟರ್‌ಗೆ ₹ 6,188.25ರಷ್ಟು ಜಾಸ್ತಿ ಮಾಡಲಾಗಿದೆ. ಇದರಿಂದಾಗಿ ಕಿಲೋ ಲೀಟರ್ ಎಟಿಎಫ್ ಬೆಲೆಯು ದೆಹಲಿಯಲ್ಲಿ ₹ 1.23 ಲಕ್ಷಕ್ಕೆ ತಲುಪಿದೆ (ಲೀಟರ್‌ಗೆ ₹ 123). ಇದು ಈವರೆಗಿನ ಗರಿಷ್ಠ ಬೆಲೆ.

ಎಟಿಎಫ್ ಬೆಲೆಯನ್ನು ಪ್ರತಿ ತಿಂಗಳ 1 ಮತ್ತು 16ನೆಯ ತಾರೀಕಿನಂದು ಪರಿಷ್ಕರಿಸಲಾಗುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏಪ್ರಿಲ್ 6ರ ನಂತರ ಪರಿಷ್ಕರಿಸಿಲ್ಲ. ಎಟಿಎಫ್ ಬೆಲೆಯನ್ನು ಮಾತ್ರ ಪರಿಷ್ಕರಿಸಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದಕ್ಕೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಯಾವುದೇ ವಿವರಣೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT