ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬಿಕ್ಕಟ್ಟು; ವಾಹನ ರಫ್ತು ಶೇ 5.5ರಷ್ಟು ಇಳಿಕೆ

Published 14 ಏಪ್ರಿಲ್ 2024, 13:09 IST
Last Updated 14 ಏಪ್ರಿಲ್ 2024, 13:09 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದ ಆಟೊಮೊಬೈಲ್‌ ರಫ್ತು ಪ್ರಮಾಣವು 2023–24ನೇ ಆರ್ಥಿಕ ವರ್ಷದಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ.

2022–23ರಲ್ಲಿ ಒಟ್ಟು 47.61 ಲಕ್ಷ ವಾಹನಗಳು ರಫ್ತಾಗಿದ್ದರೆ, 2023–24ರಲ್ಲಿ 45 ಲಕ್ಷ ರಫ್ತಾಗಿವೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ತಿಳಿಸಿದೆ.

ಕೆಲವು ವಿದೇಶಿ ಮಾರುಕಟ್ಟೆಗಳು ಅಸ್ಥಿರತೆಯಿಂದ ಕೂಡಿವೆ. ವಾಣಿಜ್ಯ ವಾಹನ ಮತ್ತು ದ್ವಿಚಕ್ರ ವಾಹನ ರಫ್ತಿನಲ್ಲಿ ದೃಢವಾಗಿರುವ ದೇಶಗಳು ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿವೆ. ಹಾಗಾಗಿ, ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎಸ್‌ಐಎಎಂನ ಅಧ್ಯಕ್ಷ ವಿನೋದ್‌ ಅಗರ್ವಾಲ್‌ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ವಾಣಿಜ್ಯ ವಾಹನ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ರಫ್ತಿನಲ್ಲಿ ಇಳಿಕೆಯಾಗಿದೆ. ಆದರೆ, ಪ್ರಯಾಣಿಕ ವಾಹನಗಳ ರಫ್ತಿನಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಪ್ರಮುಖವಾಗಿ ದ್ವಿಚಕ್ರ ವಾಹನ ವಿಭಾಗದಲ್ಲಿ ಉತ್ತಮ ಚೇತರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಪ್ರಯಾಣಿಕ ವಾಹನ ರಫ್ತು ಶೇ 1.4ರಷ್ಟು ಹೆಚ್ಚಳವಾಗಿದೆ. ಒಟ್ಟು ವಾಹನಗಳ ರಫ್ತು 6.62 ಲಕ್ಷದಿಂದ 6.72 ಲಕ್ಷಕ್ಕೆ ಏರಿಕೆಯಾಗಿದೆ. ಮಾರುತಿ ಸುಜುಕಿ ಕಾರುಗಳ ರಫ್ತು 2.55 ಲಕ್ಷದಿಂದ 2.80 ಲಕ್ಷಕ್ಕೆ ಹೆಚ್ಚಳವಾಗಿದೆ. ಹುಂಡೈ ಮೋಟರ್‌ ಇಂಡಿಯಾ ಕಾರುಗಳ ರಫ್ತು 1.53 ಲಕ್ಷದಿಂದ 1.63 ಲಕ್ಷಕ್ಕೆ ಏರಿಕೆಯಾಗಿದೆ.

ಕಿಯಾ ಮೋಟರ್ಸ್‌ 52,105, ಪೋಕ್ಸ್‌ವ್ಯಾಗನ್‌ 44,180, ನಿಸಾನ್‌ ಮೋಟರ್‌ ಇಂಡಿಯಾ 42,989 ಮತ್ತು ಹೋಂಡಾ ಕಾರುಗಳು 37,589 ರಫ್ತಾಗಿವೆ. 

ದ್ವಿಚಕ್ರ ವಾಹನಗಳ ರಫ್ತು ಪ್ರಮಾಣ ಇಳಿಕೆಯಾಗಿದೆ. 2022–23ರಲ್ಲಿ 36.52 ಲಕ್ಷ ವಾಹನಗಳು ರಫ್ತಾಗಿದ್ದರೆ 2023–24ರಲ್ಲಿ 34.58 ಲಕ್ಷ ದ್ವಿಚಕ್ರ ವಾಹನಗಳು ರಫ್ತು ಆಗಿವೆ. ವಾಣಿಜ್ಯ ವಾಹನಗಳ ರಫ್ತು ಶೇ 16ರಷ್ಟು ಇಳಿಕೆಯಾಗಿದೆ. ಒಟ್ಟು 65,816 ವಾಹನಗಳು ರಫ್ತಾಗಿವೆ. ತ್ರಿಚಕ್ರ ವಾಹನಗಳ ರಫ್ತು ಶೇ 18ರಷ್ಟು ಕುಸಿತವಾಗಿದೆ. 2.99 ಲಕ್ಷ ವಾಹನಗಳು ರಫ್ತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT