‘ಬೆಂಗಳೂರು: ಸರಾಸರಿ ಶೇ 28 ಏರಿಕೆ’
ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ಮನೆಗಳ ಬೆಲೆ ಕಳೆದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 28ರಷ್ಟು ಹೆಚ್ಚಳವಾಗಿದೆ ಎಂದು ಕ್ರೆಡಾಯ್ ಕೊಲಿಯರ್ಸ್ ಮತ್ತು ಲಯಾಸಸ್ ಫೊರಸ್ ಜಂಟಿಯಾಗಿ ನಡೆಸಿರುವ ಅಧ್ಯಯನ ವರದಿಯೊಂದು ಹೇಳಿದೆ. 2023ರ ಜೂನ್ ತ್ರೈಮಾಸಿಕದಲ್ಲಿ ಪ್ರತಿ ಚದರ ಅಡಿಗೆ ₹8688 ಇದ್ದರೆ 2024ರ ಜೂನ್ ತ್ರೈಮಾಸಿಕಕ್ಕೆ ₹11161ಕ್ಕೆ ಏರಿಕೆಯಾಗಿದೆ ಎಂದಿದೆ. ದೇಶದ ಎಂಟು ನಗರಗಳಲ್ಲಿ ಮನೆಗಳ ಬೆಲೆ ಸರಾಸರಿ ಶೇ 12ರಷ್ಟು ಹೆಚ್ಚಳವಾಗಿದ್ದು ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ (ಶೇ 30) ಅತಿಹೆಚ್ಚು ಏರಿಕೆ ಕಂಡುಬಂದಿದೆ. ಇಲ್ಲಿ ಪ್ರತಿ ಚದರ ಅಡಿಗೆ ₹8652ರಿಂದ ₹11279ಕ್ಕೆ ಹೆಚ್ಚಳ ಕಂಡಿದೆ.