ಮಂಗಳವಾರ, ಸೆಪ್ಟೆಂಬರ್ 29, 2020
22 °C

ಬ್ಯಾಂಕ್‌ ಸಾಲ ನೀಡಿಕೆ, ಠೇವಣಿ ಸಂಗ್ರಹ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬ್ಯಾಂಕ್‌ಗಳ ಸಾಲ ನೀಡಿಕೆ  ಮತ್ತು ಠೇವಣಿ ಸಂಗ್ರಹವು ಜುಲೈ 31ಕ್ಕೆ ಕೊನೆಗೊಂಡ 15 ದಿನಗಳಲ್ಲಿ ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಸಾಲ ನೀಡಿಕೆ ಶೇ 5.51ರಷ್ಟು ಹೆಚ್ಚಾಗಿದ್ದು, ₹ 102.65 ಲಕ್ಷ ಕೋಟಿಗೆ ತಲುಪಿದೆ. ಠೇವಣಿ ಸಂಗ್ರಹವು ಶೇ 11.11ರಷ್ಟು ಹೆಚ್ಚಾಗಿ ₹ 141.61 ಲಕ್ಷ ಕೊಟಿಗೆ ಏರಿಕೆಯಾಗಿದೆ.

2019ರ ಆಗಸ್ಟ್‌ 2ರ ಅಂತ್ಯಕ್ಕೆ ಸಾಲ ನೀಡಿಕೆಯು ₹ 97.29 ಲಕ್ಷ ಕೋಟಿ ಮತ್ತು ಠೇವಣಿ ಸಂಗ್ರಹವು ₹ 127.44 ಲಕ್ಷ ಕೋಟಿಗಳಷ್ಟಿತ್ತು.

ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಾಲ ನೀಡಿಕೆಯು  2019ರ ಜೂನ್‌ನಲ್ಲಿದ್ದ ಶೇ 8.7ರಕ್ಕೆ ಹೋಲಿಸಿದರೆ, 2020ರ ಜೂನ್‌ನಲ್ಲಿ ಶೇ 2.4ರಷ್ಟು ಅಲ್ಪ ಬೆಳವಣಿಗೆ ಕಂಡಿದೆ.

ಕೈಗಾರಿಕೆಗಳಿಗೆ ನೀಡಿರುವ ಸಾಲದ ಪ್ರಮಾಣ ಶೇ 2.2ರಷ್ಟಾಗಿದೆ. ಇದು 2019ರ ಜೂನ್‌ನಲ್ಲಿ ಶೇ 6.4ರಷ್ಟಿತ್ತು.

ವೈಯಕ್ತಿಕ ಸಾಲ ನೀಡಿಕೆಯು ಶೇ 10.5ರಷ್ಟು ಬೆಳವಣಿಗೆ ಸಾಧಿಸಿದೆ. 2019ರ ಜೂನ್‌ನಲ್ಲಿ ಶೇ 16.6ರಷ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು