ಮಂಗಳವಾರ, ನವೆಂಬರ್ 12, 2019
28 °C

ಬ್ಯಾಂಕ್‌ಗಳ ವಿಲೀನ, ಹೊರಗುತ್ತಿಗೆ ವಿರೋಧಿಸಿ 22ಕ್ಕೆ ಬ್ಯಾಂಕ್‌ ಮುಷ್ಕರ

Published:
Updated:

ಕೋಲ್ಕತ್ತ: ಎರಡು ಬ್ಯಾಂಕ್‌ ಸಂಘಟನೆಗಳು ಇದೇ 22ರಂದು (ಮಂಗಳವಾರ) ಒಂದು ದಿನದ ಬ್ಯಾಂಕ್‌ ಮುಷ್ಕರಕ್ಕೆ ಕರೆಕೊಟ್ಟಿವೆ.

ಇದರಿಂದ ದೇಶದಾದ್ಯಂತ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆ ಒದಗಲಿದೆ. ಬ್ಯಾಂಕ್‌ಗಳ ವಿಲೀನ, ಠೇವಣಿಗಳ ಮೇಲಿನ ಬಡ್ಡಿ ದರ ಇಳಿಕೆ, ಕೆಲಸಗಳ ಹೊರಗುತ್ತಿಗೆ ವಿರೋಧಿಸಿ ಮತ್ತು ಹೊಸ ನೇಮಕಾತಿಗೆ ಒತ್ತಾಯಿಸಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘ (ಎಐಬಿಇಎ) ಮತ್ತು ಬ್ಯಾಂಕ್‌ ಉದ್ಯೋಗಿಗಳ ಭಾರತೀಯ ಒಕ್ಕೂಟವು (ಬಿಇಎಫ್‌ಐ) ಹೇಳಿದೆ.

ತನ್ನ ಬಹುತೇಕ ಉದ್ಯೋಗಿಗಳು ಈ ಎರಡೂ ಸಂಘಟನೆಗಳ ಸದಸ್ಯತ್ವ ಹೊಂದಿಲ್ಲದಿರುವುದರಿಂದ ತನ್ನ ಬ್ಯಾಂಕ್‌ ಶಾಖೆಗಳಲ್ಲಿನ ವಹಿವಾಟಿಗೆ ಹೆಚ್ಚಿನ ಧಕ್ಕೆ ಒದಗುವುದಿಲ್ಲ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ. ಅಧಿಕಾರಿಗಳ ನಾಲ್ಕು ಸಂಘಟನೆ ಮತ್ತು ಉದ್ಯೋಗಿಗಳ ಮೂರು ಸಂಘಟನೆಗಳು ಈ ಮುಷ್ಕರದಲ್ಲಿ ಭಾಗಿಯಾಗುತ್ತಿಲ್ಲ.

ಪ್ರತಿಕ್ರಿಯಿಸಿ (+)