ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಡಬ್ಲ್ಯು-3 ಸರಣಿಯ ಹೊಸ ಕಾರ್‌ ಮಾರುಕಟ್ಟೆಗೆ

Last Updated 24 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಐಷಾರಾಮಿ ಕಾರುಗಳನ್ನು ತಯಾರಿಸುವ ಬಿಎಂಡಬ್ಲ್ಯು ಇಂಡಿಯಾ ತನ್ನ 3ನೇ ಸರಣಿಯ ಹೊಸ ವಿನ್ಯಾಸದ ಮೂರು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಆಧುನಿಕ ಹಾಗೂ ಮುಂದುವರಿದ ಸೆಗ್ಮೆಂಟ್‌ ಫರ್ಸ್ಟ್‌ ತಂತ್ರಜ್ಞಾನ ಒಳಗೊಂಡಿರುವ, 7ನೇ ಜನರೇಷನ್‌ನ ಈ ಕಾರ್‌ಗಳು ಸ್ಥಳೀಯವಾಗಿ ತಯಾರಾಗಿದ್ದು, ಚಾಲಕ ಸ್ನೇಹಿ ಹಾಗೂ ಪ್ರಯಾಣಿಕರಿಗೆ ಹಿತಾನುಭವದ ನೀಡುವ ಉದ್ದೇಶದೊಂದಿಗೆ ಸಿದ್ಧಗೊಂಡಿವೆ’ ಎಂದು ಸಂಸ್ಥೆಯ ಅಧ್ಯಕ್ಷ ರುದ್ರತೇಜ್‌ ಸಿಂಗ್‌ ಮಾಹಿತಿ ನೀಡಿದರು.

‘ಆಧುನಿಕ ಯುಗದ ಗ್ರಾಹಕರು ತಮ್ಮ ವಾಹನಗಳ ವಿನ್ಯಾಸದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಬಿಎಂಡಬ್ಲ್ಯೂ ಸಂಸ್ಥೆ ಅವರ ಬೇಡಿಕೆಗೆ ಅನುಗುಣವಾಗಿ ಬದಲಾಗುತ್ತಿದೆ. ಸಂಸ್ಥೆಯ ಉತ್ಪನ್ನಗಳಲ್ಲೇ ಪ್ರಮುಖವಾಗಿರುವ ಈ ಸರಣಿಯ ಕಾರ್‌ಗಳು ಸಂಪೂರ್ಣ ಆನಂದದಾಯಕ ಚಾಲನೆಗೆ ಪ್ರೇರಣೆಯಾಗಿ ರೂಪುಗೊಂಡಿವೆ’ ಎಂದು ಅವರು ಹೇಳಿದರು.

’320 ಡಿ ಸ್ಪೋರ್ಟ್ ಮತ್ತು 320 ಡಿ ಲಕ್ಷುರಿ ಲೈನ್ ಮಾದರಿಗಳು ಡೀಸೆಲ್ ವೇರಿಯಂಟ್‌ಗಳಲ್ಲಿ ಲಭ್ಯವಿದ್ದರೆ, 330ಐ ಎಂ ಸ್ಪೋರ್ಟ್‌ ಪೆಟ್ರೋಲ್ ವೇರಿಯಂಟ್‌ನಲ್ಲಿ ದೊರೆಯಲಿದೆ.ಹಳೆಯ ಮಾದರಿಗೆ ಹೋಲಿಸಿದರೆ ಈ ಸರಣಿಯ ಹೊಸ ಮಾದರಿಯು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಹೊಸ ವಿನ್ಯಾಸವು 55 ಕೆ.ಜಿ.ಯಷ್ಟು ಕಡಿಮೆ ತೂಕ ಹೊಂದಿದೆ. ಆದ್ಯತೆಯ ಮೇರೆಗೆ ಅಗತ್ಯ ಸುರಕ್ಷತಾ ಸಾಧನಗಳೊಂದಿಗೆ ಈ ಕಾರ್‌ಗಳು ಸಿದ್ಧಗೊಂಡಿವೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT