ಶನಿವಾರ, ಮಾರ್ಚ್ 25, 2023
23 °C

‘ವರ್ಷಾಂತ್ಯಕ್ಕೆ ಬೋಯಿಂಗ್‌ ಕ್ಯಾಂಪಸ್‌ ಶುರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಆಗುತ್ತಿರುವ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಕ್ಯಾಂಪಸ್‌ ವರ್ಷಾಂತ್ಯದ ವೇಳೆಗೆ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೋಯಿಂಗ್‌ ಇಂಡಿಯಾ ಕಂಪನಿ ಸೋಮವಾರ ತಿಳಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಬೋಯಿಂಗ್‌ ಇಂಡಿಯಾದ ಅಧ್ಯಕ್ಷ ಸಲೀಲ್‌ ಗುಪ್ತೆ, ‘43 ಎಕರೆ ಪ್ರದೇಶದಲ್ಲಿ ₹ 1,629 ಕೋಟಿ ವೆಚ್ಚದಲ್ಲಿ ಕ್ಯಾಂಪಸ್‌ ನಿರ್ಮಾಣ ಆಗುತ್ತಿದೆ. ವರ್ಷಾಂತ್ಯದ ವೇಳೆಗೆ ಕಾರ್ಯಾಚರಣೆ ಆರಂಭಿಸಲಿದ್ದು, ಅಮೆರಿಕದಾಚೆಗೆ ಕಂಪನಿಯ ಅತಿದೊಡ್ಡ ಕ್ಯಾಂಪಸ್‌ ಇದಾಗಿದೆ’ ಎಂದರು.

‘ವಿಮಾನಯಾನ ಉದ್ಯಮವು ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ತರಲು 2050ರ ಗುರಿ ಇಟ್ಟುಕೊಂಡಿದೆ. ಆದರೆ ಈ ಗುರಿ ಸಾಧನೆ ಕಷ್ಟ. ಏಕೆಂದರೆ ಕಾರು, ಬೈಕ್‌, ಬಸ್‌ಗಳಲ್ಲಿ ವಿದ್ಯುತ್‌ ಚಾಲಿತ ಮೋಟರ್‌ ಅಳವಡಿಸಿದಷ್ಟು
ಸುಲಭ ಇದಲ್ಲ. ವಿಮಾನಯಾನ ಉದ್ಯಮದಲ್ಲಿ ಈ ನಿಟ್ಟಿನಲ್ಲಿ ಮಾಡಿರುವ ಹೂಡಿಕೆಯಿಂದ ಕಾರ್ಯಸಾಧ್ಯವಾಗುವಂತಹ ಯಾವುದೇ ಫಲಿತಾಂಶ ಬಂದಿಲ್ಲ. ಹೀಗಾಗಿ ಇಂಧನ ಕ್ಷಮತೆ ಹೆಚ್ಚಿಸುವ ಅಥವಾ ಕಡಿಮೆ ಇಂಧನ ಬಳಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಜೈವಿಕ ಇಂಧನ, ಕೃಷಿ ತ್ಯಾಜ್ಯದಿಂದ ಉತ್ಪಾದನೆ ಆಗುವ ಇಂಧನ ಬಳಕೆ ಮಾಡುವ ಸಾಧ್ಯತೆಗಳ ಪರಿಶೀಲನೆ ನಡೆದಿದೆ’ ಎಂದು ಸಲೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು