ಮಂಗಳೂರು: ‘ಮಹಾತ್ಮ ಗಾಂಧಿ ಅವರ ಸ್ವದೇಶಿ ಎಂಬ ಉದಾತ್ತ ಚಿಂತನೆಯ ಮೂಲಕ ಸ್ವಾತಂತ್ರ್ಯಪೂರ್ವದಲ್ಲಿಯೇ ಪ್ರಾರಂಭಗೊಂಡ ಕರ್ಣಾಟಕ ಬ್ಯಾಂಕ್, ಈಗ ಸಾವಿರ ಶಾಖೆಗಳನ್ನು ಹೊಂದುವ ಗುರಿ ಇಟ್ಟುಕೊಂಡಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ತಿಳಿಸಿದರು.

ನಗರದ ಕಾವೂರಿನ ಗಾಂಧಿನಗರದಲ್ಲಿನಡೆದ ಬ್ಯಾಂಕ್‌ನ 825ನೇ ಶಾಖೆ ಮತ್ತು ಕ್ಯಾಷ್ ರಿಸೈಕ್ಲರ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘94 ವರ್ಷಗಳಲ್ಲಿ ಬ್ಯಾಂಕ್ ಯಾವುದೇ ನಷ್ಟ ಕಂಡಿಲ್ಲ. ನೂತನ ಯೋಜನೆಗಳ ಮೂಲಕ ಬ್ಯಾಂಕ್ ತನ್ನ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಜನರ ಸ್ಪಂದನೆಯನ್ನು ಆಧರಿಸಿ ಹೊಸ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆ ವೇಗ ಪಡೆಯುತ್ತಿದೆ. ಬೆಂಗಳೂರಿನಲ್ಲಿಯೂ ಎರಡು ಶಾಖೆಗಳು ಆರಂಭಗೊಳ್ಳುತ್ತಿದ್ದು, ಈ ಮೂಲಕ ಬ್ಯಾಂಕ್ 827 ಶಾಖೆಗಳನ್ನು ಹೊಂದಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.