ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಹ್ಲ್‌ನಿಂದ ₹ 43 ಕೋಟಿ ಹೂಡಿಕೆ

Last Updated 5 ಅಕ್ಟೋಬರ್ 2021, 11:36 IST
ಅಕ್ಷರ ಗಾತ್ರ

ಬೆಂಗಳೂರು: ಜರ್ಮನಿ ಮೂಲದ, ಹಣಕಾಸು ವಹಿವಾಟುಗಳಿಗೆ ಅಗತ್ಯವಾದ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸುವ ಬುಹ್ಲ್‌ ಸಮೂಹವು ಭಾರತದಲ್ಲಿ ಒಟ್ಟು ₹ 43 ಕೋಟಿ ಹೂಡಿಕೆ ಮಾಡಲಿದೆ.

ಅಲ್ಲದೆ, ಬೆಂಗಳೂರಿನ ಮಾರುಕಟ್ಟೆಗಾಗಿ ‘ಇಂಪ್ರೆಸ್’ ಹೆಸರಿನ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದು, ಸಣ್ಣ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ಡಿಜಿಟಲ್ ರೂಪದಲ್ಲಿ ಬಿಲ್‌ ಸಿದ್ಧಪಡಿಸಿಕೊಡಲು ಇದು ನೆರವಾಗಲಿದೆ ಎಂದು ಕಂಪನಿ ಹೇಳಿದೆ.

ಸಣ್ಣ ಕಿರಾಣಿ ಅಂಗಡಿಗಳ ಮಾಲೀಕರಿಗೆ ಈ ಅಪ್ಲಿಕೇಷನ್‌ ಬಳಸಿ ದಾಸ್ತಾನು ನಿರ್ವಹಣೆ, ತಮ್ಮ ಗ್ರಾಹಕರ ಪ್ರೊಫೈಲ್ ನಿರ್ವಹಣೆ ಕೆಲಸಗಳನ್ನು ಕೂಡ ಮಾಡಲು ಇದು ನೆರವಾಗಲಿದೆ. ಈ ಅಪ್ಲಿಕೇಷನ್ ಬಳಸಲು ಹೆಚ್ಚುವರಿಯಾಗಿ ಯಾವುದೇ ಹಾರ್ಡ್‌ವೇರ್‌ ಖರೀದಿಯ ಅಗತ್ಯ ಇಲ್ಲ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT