ಶನಿವಾರ, ಜೂನ್ 25, 2022
21 °C

ಬ್ಯಾಡಗಿ ಡಬ್ಬಿ ಮೆಣಸು ದಾಖಲೆ ಆವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ(ಹಾವೇರಿ): ಕಳೆದ ವಾರ ದಾಖಲೆ ಬೆಲೆ ಸಿಕ್ಕಿದ್ದರಿಂದ ಇಲ್ಲಿನ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೋಮವಾರ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ 1,97,770 ಚೀಲ (49,500 ಕ್ವಿಂಟಲ್‌) ಆವಕವಾಗಿದೆ. ಇದು ಇದುವರೆಗಿನ ದಾಖಲೆ ಪ್ರಮಾಣದ ಆವಕವಾಗಿದೆ.

ಸಾವಯವ ಪದ್ಧತಿಯಲ್ಲಿ ಬೆಳೆದ ಒಂದು ಚೀಲ (25 ಕೆ.ಜಿ) ಬ್ಯಾಡಗಿ
ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹66,666 ರಂತೆ ಮಾರಾಟವಾಗಿದೆ. ಇದೇ ತಳಿಯ ಮೆಣಸಿನಕಾಯಿಗೆ ಕಳೆದ ಗುರುವಾರ ₹76,109 ದರ ಲಭಿಸಿತ್ತು. ಕ್ವಿಂಟಲ್‌ಗೆ ₹ 10,000 ಕಡಿಮೆಯಾಗಿದೆ.

ಉಳಿದಂತೆ ಕಡ್ಡಿ ಮತ್ತು ಗುಂಟೂರು ತಳಿ ಮೆಣಸಿನಕಾಯಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿವೆ.
ಒಟ್ಟು 383 ಖರೀದಿ ವರ್ತಕರು ಇಂದಿನ ಟೆಂಡರ್‌ನಲ್ಲಿ ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು