ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಸ್‌ ಖರೀದಿಸಲು ಆಮಿಷ: ‘ಬೈಜೂಸ್‌’ನ ರವೀಂದ್ರನ್‌ಗೆ ಮಕ್ಕಳ ಆಯೋಗ ನೋಟಿಸ್‌

ಆರ್ಥಿಕ ಸಂಕಷ್ಟಲ್ಲಿರುವ ಬೆಂಗಳೂರು ಮೂಲದ ಕಂಪನಿಗೆ ಮತ್ತೊಂದು ಸಂಕಷ್ಟ
Last Updated 17 ಡಿಸೆಂಬರ್ 2022, 6:04 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಮೂಲದ ಎಜುಟೆಕ್‌ ಸ್ಟಾರ್ಟಪ್‌ ಕಂಪನಿ ‘ಬೈಜೂಸ್‌‘ನ ಸಿಒಒ ಬೈಜೂ ರವೀಂದ್ರನ್‌ ಅವರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವಿಚಾರಣೆಗೆ ನೋಟಿಸ್‌ ಜಾರಿ ಮಾಡಿದೆ.

ಬೈಜೂಸ್‌ನಲ್ಲಿ, ಕೋರ್ಸ್‌ಗಳನ್ನು ಖರೀದಿ ಮಾಡಲು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಮಿಷ ಒಡ್ಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಗ್ರಾಹಕರ ಹಕ್ಕು ರಕ್ಷಣಾ ವೆಬ್‌ಸೈಟ್‌ಗಳಲ್ಲಿ ಕೇಳಿ ಬಂದ ದೂರುಗಳ ಅನ್ವಯ ರವೀಂದ್ರನ್‌ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ‘ಎನ್‌ಡಿಟಿವಿ‘ ವರದಿ ಮಾಡಿದೆ. ನಮ್ಮ ವಿರುದ್ಧ ದಬ್ಬಾಳಿಕೆ ಮಾಡಿ ಹಣ ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹಲವು ಪೋಷಕರು ದೂರು ನೀಡಿದ್ದರು.

ಪೋಷಕರು ಹಾಗೂ ಮಕ್ಕಳಿಗೆ ಆಮಿಷ ಒಡ್ಡುವ ದುಷ್ಕೃತ್ಯ ಎಸಗಿ, ಸಾಲ ಒಪ್ಪಂದಗಳ ಮೂಲಕ ಮಕ್ಕಳ ಕಲ್ಯಾಣಕ್ಕೆ ತಡೆ ಒಡ್ಡುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಹೀಗಾಗಿ ರವೀಂದ್ರನ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಹೇಳಿದೆ.

ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ಆಯೋಗವು ಕಂಪನಿಗೆ ಸೂಚನೆ ನೀಡಿದ್ದು, ಮಕ್ಕಳಿಗೆ ಬೈಜೂಸ್‌ ಒದಗಿಸುತ್ತಿರುವ ಕೋರ್ಸ್‌, ಪಠ್ಯ ರಚನೆ, ಶುಲ್ಕ, ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ, ಕಂಪನಿಯ ಹಣ ಮಾರುಪಾವತಿ ನೀತಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದೆ.

ಅಲ್ಲದೇ ಎಜು–ಟೆಕ್‌ ಕಂಪನಿಯಾಗಿ ನೋಂದಣಿಯಾಗಿರುವುದರ ಬಗ್ಗೆ ದಾಖಲೆಯನ್ನೂ ನೀಡಿ ಎಂದು ಬೈಜೂಸ್‌ಗೆ ಆಯೋಗ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT