ಮಂಗಳವಾರ, ಏಪ್ರಿಲ್ 7, 2020
19 °C

ಕೆನರಾ ಬ್ಯಾಂಕ್‌ನಲ್ಲಿ ಆನ್‌ಲೈನ್‌ ಇನ್‌ಸ್ಟಾ ಡಿಮ್ಯಾಟ್‌ ಖಾತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆನರಾ ಬ್ಯಾಂಕ್‌ನ ಸಂಪೂರ್ಣ ಒಡೆತನಕ್ಕೆ ಒಳಪಟ್ಟಿರುವ ಕೆನರಾ ಬ್ಯಾಂಕ್ ಸೆಕ್ಯುರಿಟೀಸ್‌ ಲಿಮಿಟೆಡ್‌, ಆನ್‌ಲೈನ್‌ ಇನ್‌ಸ್ಟಾ ಡಿಮ್ಯಾಟ್‌ ಖಾತೆ ಸೌಲಭ್ಯಕ್ಕೆ ಚಾಲನೆ ನೀಡಿದೆ.

ಬ್ಯಾಂಕ್‌ನ ಗ್ರಾಹಕರಿಗೆ ಅನುಕೂಲತೆ ಒದಗಿಸುವ ಉದ್ದೇಶದಿಂದ ನ್ಯಾಷನಲ್‌ ಸೆಕ್ಯುರಿಟೀಸ್‌ ಡಿಪಾಸಿಟರೀಸ್‌ ಲಿಮಿಟೆಡ್‌ನ (ಎನ್‌ಎಸ್‌ಡಿಎಲ್‌) ಸಹಯೋಗದಲ್ಲಿ  ಈ ಸೌಲಭ್ಯ ಆರಂಭಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ಈ ಸೌಲಭ್ಯ ಆರಂಭಿಸಿದ ಮೊದಲ ಬ್ಯಾಂಕ್‌ ಇದಾಗಿದೆ.

‘ಎನ್‌ಎಸ್‌ಡಿಎಲ್‌’ನ ಈ ಇನ್‌ಸ್ಟಾ ಡಿಮ್ಯಾಟ್‌ ಖಾತೆ ಸೌಲಭ್ಯವನ್ನು ಗ್ರಾಹಕರು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮತ್ತು ಹೊಸ ನಿಧಿ ಕೊಡುಗೆಗೆ (ಎನ್‌ಎಫ್‌ಒ) ಅರ್ಜಿ ಸಲ್ಲಿಸುವುದೂ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಬಹುದು.

ಗ್ರಾಹಕರು ತಮ್ಮ ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯದ ಮೂಲಕ ಈ ಖಾತೆ ತೆರೆಯಬಹುದು. ಒಂದು ನಿಮಿಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು