ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ

ಸೆಮಿಕಂಡಕ್ಟರ್‌ ಚಿಪ್‌ ಕೊರತೆ ಬಗೆಹರಿಯುವ ಸೂಚನೆ
Last Updated 2 ಜುಲೈ 2022, 15:44 IST
ಅಕ್ಷರ ಗಾತ್ರ

ನವದೆಹಲಿ: ಸೆಮಿಕಂಡಕ್ಟರ್‌ ಚಿಪ್‌ ಕೊರತೆಯು ನಿಧಾನವಾಗಿ ಬಗೆಹರಿಯುವ ಸೂಚನೆ ದೊರೆತಿರುವುದರಿಂದ ಜೂನ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಹೆಚ್ಚಾಗಿದೆ.

ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟರ್ಸ್‌ ಸೇರಿದಂತೆ ಪ್ರಮುಖ ಕಂಪನಿಗಳ ಮಾರಾಟವು 2021ರ ಜೂನ್‌ಗೆ ಹೋಲಿಸಿದರೆ 2022ರ ಜೂನ್‌ನಲ್ಲಿ ಏರಿಕೆ ಆಗಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಸಗಟು ಮಾರಾಟವು 1.47 ಲಕ್ಷದಿಂದ 1.55 ಲಕ್ಷಕ್ಕೆ ಶೇ 5.7ರಷ್ಟು ಏರಿಕೆ ಆಗಿದೆ. ದೇಶಿ ಮಾರಾಟವು ಶೇ 1.28ರಷ್ಟು ಹೆಚ್ಚಾಗಿದೆ.

ಹುಂಡೈ ಮೋಟರ್‌ ಇಂಡಿಯಾದ ಒಟ್ಟಾರೆ ಮಾರಾಟವು ಶೇ 14.5ರಷ್ಟು ಏರಿಕೆ ಆಗಿದ್ದು, 62,351ಕ್ಕೆ ತಲುಪಿದೆ. ದೇಶಿ ಮಾರಾಟ ಶೇ 21ರಷ್ಟು ಹೆಚ್ಚಾಗಿದೆ.

ಹೊಸದಾಗಿ ಬಿಡುಗಡೆ ಮಾಡಿರುವ ‘ಹುಂಡೈ ವೆನ್ಯು’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿಯ ಮಾರಾಟ ವಿಭಾಗದ ನಿರ್ದೇಶಕ ತರುಣ್‌ ಗರ್ಗ್‌ ಹೇಳಿದ್ದಾರೆ.

ಟಾಟಾ ಮೋಟರ್ಸ್‌ ಕಂಪನಿಯ ಪ್ರಯಾಣಿಕ ವಾಹನಗಳ ದೇಶಿ ಮಾರಾಟ ಶೇ 87ರಷ್ಟು ಹೆಚ್ಚಾಗಿದ್ದು, 45,197ಕ್ಕೆ ಏರಿಕೆ ಆಗಿದೆ.

ಕಿಯಾ ಇಂಡಿಯಾ ಮಾರಾಟ ಶೇ 60ರಷ್ಟು ಹೆಚ್ಚಾಗಿದೆ. ಎಂಜಿ ಮೋಟರ್‌ ಇಂಡಿಯಾ 4,503 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 27ರಷ್ಟು ಮಾರಾಟ ಪ್ರಗತಿ ಸಾಧಿಸಿದೆ.

ಫೋಕ್ಸ್‌ವ್ಯಾಗನ್‌ ಪ್ಯಾಸೆಂಜರ್ಸ್‌ ಕಾರ್ಸ್‌ ಇಂಡಿಯಾ ಕಂಪನಿಯ ಮಾರಾಟವು ಎರಡು ಪಟ್ಟು ಹೆಚ್ಚಾಗಿದೆ.

ದ್ವಿಚಕ್ರ ವಾಹನ ಮಾರಾಟ ಹೆಚ್ಚಳ: ಪ್ರಮುಖ ಕಂಪನಿಗಳ ದ್ವಿಚಕ್ರ ವಾಹನ ಮಾರಾಟ ಸಹ ಜೂನ್‌ನಲ್ಲಿ ಹೆಚ್ಚಾಗಿದೆ. ಹೀರೊ ಮೊಟೊಕಾರ್ಪ್‌ ಕಂಪನಿಯ ಒಟ್ಟಾರೆ ಮಾರಾಟವು ಶೇ 3ರಷ್ಟು ಹೆಚ್ಚಾಗಿದೆ.

ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾದ ದ್ವಿಚಕ್ರ ವಾಹನ ಮಾರಾಟವು ಶೇ 65ರಷ್ಟು ಏರಿಕೆ ಆಗಿದೆ. ಟಿವಿಎಸ್‌ ಮೋಟರ್‌ ಕಂಪನಿಯ ಒಟ್ಟಾರೆ ಮಾರಾಟ ಶೇ 22ರಷ್ಟು ಹೆಚ್ಚಾಗಿದೆ.

ಸುಜುಕಿ ಮೋಟರ್‌ಸೈಕಲ್‌ನ ಮಾರಾಟವು ಜೂನ್‌ನಲ್ಲಿ ಶೇ 37ರಷ್ಟು ಏರಿಕೆ ಕಂಡಿದೆ. ಬಜಾಜ್‌ ಆಟೊ ಕಂಪನಿಯ ದೇಶಿ ಮಾರಾಟ ಶೇ 20ರಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT