ಬ್ಯಾಡಗಿ (ಹಾವೇರಿ): ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಡಬ್ಬಿ ಮೆಣಸಿನಕಾಯಿ ಬೆಲೆ ₹ 35,199ಕ್ಕೆ ತಲುಪಿದ್ದು, ಮಾರುಕಟ್ಟೆ ಇತಿಹಾಸದಲ್ಲಿ ಮೊದಲ ಬಾರಿಗೆ ಅತೀ ಹೆಚ್ಚಿನ ಬೆಲೆ ಕಂಡಿದೆ.

ಗುಂಟೂರು ತಳಿ ಗರಿಷ್ಠ ಬೆಲೆ ₹14,009ಕ್ಕೆ ತಲುಪಿದೆ. ಒಟ್ಟು 44,429 ಚೀಲ ಮೆಣಸಿನಕಾಯಿ ಆವಕವಾಗಿದೆ.

‘ಮೆಣಸಿನಕಾಯಿಗೆ ಬೇಡಿಕೆ ಇದ್ದರೂ ಹವಾಮಾನ ವೈಪರೀತ್ಯದಿಂದ ಮೆಣಸಿನಕಾಯಿ ಒಣಗಿಸಲು ಬಿಸಿಲು ಇರಲಿಲ್ಲ. ಅಲ್ಲದೆ ಗ್ರಾಮ ಪಂಚಾಯಿತಿ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಆವಕದಲ್ಲಿ ತುಸು ಇಳಿಕೆಯಾಗಿದೆ. ಹೀಗಾಗಿ ಗರಿಷ್ಠ ಬೆಲೆಯಲ್ಲಿ ಏರಿಕೆಯಾಗಿದೆ. ಒಟ್ಟು 321 ಖರೀದಿ ವರ್ತಕರು ಟೆಂಡರ್ನಲ್ಲಿ ಭಾಗವಹಿಸಿದ್ದರು’ ಎಂದು ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.