ಗುರುವಾರ , ಮೇ 13, 2021
22 °C

ಶೇ 18.3ರಷ್ಟು ಬೆಳೆದ ಚೀನಾ ಜಿಡಿಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್: ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಶೇಕಡ 18.3ರಷ್ಟು ಬೆಳವಣಿಗೆ ಸಾಧಿಸಿದೆ. ದೇಶಿ ಮಾರುಕಟ್ಟೆಯಲ್ಲಿ ಹಾಗೂ ವಿದೇಶಗಳಲ್ಲಿ ಉತ್ತಮ ಬೇಡಿಕೆ ಕಂಡುಬಂದ ಕಾರಣಕ್ಕೆ ಈ ಬೆಳವಣಿಗೆ ಸಾಧ್ಯವಾಗಿದೆ.

ಚೀನಾ ದೇಶವು 1993ರಿಂದ ತನ್ನ ಜಿಡಿಪಿ ಅಂಕಿ–ಅಂಶಗಳನ್ನು ಪ್ರಕಟಿಸಲು ಆರಂಭಿಸಿದೆ. ಆ ಇಸವಿಯಿಂದ ಇಲ್ಲಿಯವರೆಗೆ ದಾಖಲಾಗಿರುವ ಅತಿ ಹೆಚ್ಚಿನ ತ್ರೈಮಾಸಿಕ ಬೆಳವಣಿಗೆ ಇದು ಎಂದು ಚೀನಾದ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಬಿಎಸ್‌) ಹೇಳಿದೆ.

ಮಾರ್ಚ್‌ ತ್ರೈಮಾಸಿಕದಲ್ಲಿ ಚೀನಾದಲ್ಲಿ ಕೈಗಾರಿಕಾ ಉತ್ಪಾದನೆ ಸ್ಥಿರ ಏರಿಕೆ ಕಂಡಿದೆ, ಮಾರುಕಟ್ಟೆಯಲ್ಲಿ ಮಾರಾಟದ ಪ್ರಮಾಣ ಹೆಚ್ಚಿದೆ, ವಿದೇಶಿ ಮಾರುಕಟ್ಟೆಗಳಿಗೆ ಸಾಗುವ ಸರಕುಗಳ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಅದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು