ಸೋಮವಾರ, ಸೆಪ್ಟೆಂಬರ್ 27, 2021
22 °C

ಜಾಗತಿಕ ಚಿಪ್‌ ಕೊರತೆ: ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಮೇಲೆ ಪರಿಣಾಮ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH Photo

ನವದೆಹಲಿ: ಆನ್‌ಲೈನ್‌ ವ್ಯವಹಾರಕ್ಕೆ ಸಾಕಷ್ಟು ಉತ್ತೇಜನ ಸಿಗುತ್ತಿರುವ ಬೆನ್ನಲ್ಲೇ ಚಿಪ್‌ಗಳ ಕೊರತೆ ಎದುರಾಗಿದೆ. ಇದರಿಂದ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಸ್ಮಾರ್ಟ್‌ ಪೇಮೆಂಟ್‌ ಅಸೋಸಿಯೇಷನ್‌ ಎಚ್ಚರಿಕೆ ನೀಡಿದೆ.

ಶೇಕಡಾ 90ರಷ್ಟು ನಗದು ರಹಿತ ಆನ್‌ಲೈನ್‌ ವ್ಯವಹಾರ ಮಾಡುವವರು ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸುತ್ತಾರೆ. ಶೇಕಡಾ 40-60ರಷ್ಟು ಆನ್‌ಲೈನ್‌ ಪೇಮೆಂಟ್‌ಗೆ ಕಾರ್ಡ್‌ಗಳು ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡುತ್ತವೆ. ಪ್ರತಿದಿನ ಸುಲಲಿತ ವ್ಯವಹಾರಗಳಿಗೆ ಅಗತ್ಯ ಚಿಪ್‌ಗಳಿರುವ ಕಾರ್ಡ್‌ಗಳನ್ನು ರಫ್ತು ಮಾಡಬೇಕು. ವಿಶ್ವದಾದ್ಯಂತ ಪ್ರತಿವರ್ಷ 300 ಕೋಟಿ ಇಎಂವಿ ಮೂಲದ ಪೇಮೆಂಟ್‌ ಕಾರ್ಡ್‌ಗಳನ್ನು ತಯಾರಿಸಲಾಗುತ್ತದೆ. 

ಬ್ಯಾಂಕ್‌ ಖಾತೆ ತೆರೆದವರಿಗೆ ಕನಿಷ್ಠ 1 ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬೇಕು. ಪೇಮೆಂಟ್‌ ಕಾರ್ಡ್‌ನ ಅವಧಿ ಮುಗಿದಿದ್ದರೆ ಹೊಸ ಕಾರ್ಡ್‌ಗಳು ಬೇಕು. ಚಿಪ್‌ ಮುರಿದಿದ್ದರೆ ಬದಲಿ ಕಾರ್ಡ್‌ ಬೇಕಾಗುತ್ತದೆ. ಹೀಗಾಗಿ ಚಿಪ್‌ಗಳ ಬೇಡಿಕೆ ಹೆಚ್ಚಿದೆ. ಕಳೆದ ವರ್ಷ ಕೊರೊನಾ ವೈರಸ್‌ ಕಾರಣದಿಂದ ಚಿಪ್‌ ತಯಾರಕಾ ಕಂಪನಿಗಳು ಮುಚ್ಚಿವೆ. ಹಲವು ಕಂಪನಿಗಳು ಪುನಃ ಚಿಪ್‌ ಉತ್ಪಾದನೆಯನ್ನು ಆರಂಭಿಸಿದ್ದರೂ ನೌಕರರ ಕೊರತೆ ಎದುರಿಸುತ್ತಿವೆ. ಹೀಗಾಗಿ ಅಗತ್ಯ ಪ್ರಮಾಣದ ಚಿಪ್‌ಗಳನ್ನು ಒದಗಿಸುವಲ್ಲಿ ಕಂಪನಿಗಳು ಸವಾಲು ಎದುರಿಸುತ್ತಿವೆ ಎಂದು 'ಎನ್‌ಡಿಟಿವಿ' ವರದಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು