ವಾಣಿಜ್ಯ ಮತ್ತು ಷೇರು ಮಾರುಕಟ್ಟೆ ಪ್ರಶ್ನೋತ್ತರ

ಬುಧವಾರ, ಜೂಲೈ 17, 2019
25 °C

ವಾಣಿಜ್ಯ ಮತ್ತು ಷೇರು ಮಾರುಕಟ್ಟೆ ಪ್ರಶ್ನೋತ್ತರ

Published:
Updated:
Prajavani

ಪುಟ್ಟಮಣಿ, ಊರು ಬೇಡ

ನಾನು ಹಿರಿಯ ನಾಗರಿಕಳು. ನನ್ನ ಮಗನಿಗೆ ಹಾಗೂ ಮಗಳಿಗೆ ಒಂದೊಂದು ಮಕ್ಕಳಿದ್ದಾರೆ. ಕ್ರಮವಾಗಿ 7 ಹಾಗೂ 5 ವರ್ಷ. ಈ ಮಕ್ಕಳ ಹೆಸರಿನಲ್ಲಿ ₹ 1 ಲಕ್ಷ ಠೇವಣಿ ಮಾಡಲು ಮಾರ್ಗದರ್ಶಿ ಮಾಡಿರಿ. ಈ ಹಣ ಮಗನಿಗೇ ಸೇರಬೇಕು. ಮೊಮ್ಮಗನ ಹೆಸರಿನಲ್ಲಿ ಒಂದು ವರ್ಷದ ಹಿಂದೆ ₹ 20 ಲಕ್ಷ ಇರಿಸಿದ್ದೆ. ಒಂದೇ ಬ್ಯಾಂಕಿನಲ್ಲಿ ಇರಿಸಬಹುದೇ ತಿಳಿಸಿರಿ. ಕರ್ಣಾಟಕ ಬ್ಯಾಂಕ್ ಆಗಬಹುದೇ, ಮಾಹಿತಿ ನೀಡಿರಿ.

ಉತ್ತರ: ನಿಮ್ಮ ಯೋಜನೆ ಚೆನ್ನಾಗಿದೆ. ಅಪ್ರಾಪ್ತ ವಯಸ್ಸಿನವರ ಹೆಸರಿನಲ್ಲಿ ಠೇವಣಿ ಇರಿಸುವಾಗ ಹೆತ್ತವರಲ್ಲಿ ಯಾರಾದರೂ Minor by guardian ಆಗಿ ಸಿಹಿ ಹಾಕಬೇಕು. ಒಂದೇ ಬ್ಯಾಂಕಿನಲ್ಲಿ ಇರಿಸುವುದರಿಂದ ತೊಂದರೆ ಇಲ್ಲ. ಕರ್ಣಾಟಕ ಬ್ಯಾಂಕ್ ಖಾಸಗಿ ಬ್ಯಾಂಕ್‌ ಆದರೂ ಸುಭದ್ರವಾದ ಬ್ಯಾಂಕ್ ಆಗಿದೆ. ಅಲ್ಲಿ ಅವರ ’ಅಭ್ಯುದಯ ಕ್ಯಾಷ್ ಸರ್ಟಿಫಿಕೇಟ್‌ನಲ್ಲಿ ಮಕ್ಕಳ ಹೆಸರಿನಲ್ಲಿ 10 ವರ್ಷಗಳ ಅವಧಿಗೆ ಹೂಡಿರಿ.

***
ನವೀನ್‌ರಾಜ್, ಮೈಸೂರು

ನಾನು 5 ವರ್ಷಗಳಿಂದ ಉಳಿತಾಯ ಮಾಡಿ ಅಂಚೆ ಕಚೇರಿ ಆರ್.ಡಿ.ಯಿಂದ ₹ 6 ಲಕ್ಷ ಪಡೆದಿದ್ದೇನೆ. ನಾನು 30X40 ಅಳತೆ ನಿವೇಶನ ಕೊಳ್ಳಬೇಕೆಂದಿದ್ದೇನೆ. ಆದರೆ ನಾನು ಕಾರ್ಮಿಕ, ವಯಸ್ಸು 27. ತಿಂಗಳಿಗೆ 10–15 ಸಾವಿರ ಹಣ ಉಳಿಸುತ್ತೇನೆ. ನಿವೇಶನ ಕೊಳ್ಳಲು ₹ 7–8 ಲಕ್ಷ ಸಾಲ ಪಡೆಯಲು ಮಾರ್ಗದರ್ಶನ ಮಾಡಿರಿ.

ಉತ್ತರ: ಬ್ಯಾಂಕುಗಳು ಸಾಲ ನೀಡುವಾಗ ಸಾಲ ಮರು ಪಾವತಿಸುವ ಸಾಮರ್ಥ್ಯ ನೋಡುತ್ತವೆ. ನಿಮಗೆ ಸಾಮರ್ಥ್ಯವಿರುವಲ್ಲಿ ಪುರಾವೆ ಕೇಳುತ್ತಾರೆ. ನೌಕರಿಯಾದಲ್ಲಿ ಸಂಬಳದ ಚೀಟಿ (pay Slip) ಉಳಿದವರಿಗೆ 3 ವರ್ಷಗಳ I.T. Return ಕೇಳುತ್ತಾರೆ. ಒಟ್ಟಿನಲ್ಲಿ ಇವೆರಡೂ ಇಲ್ಲವಾದಲ್ಲಿ ಸಾಲ ದೊರೆಯುವುದಿಲ್ಲ.

ನಿಮ್ಮ ಆದಾಯದ ವಿವರಣೆ ನೀಡಿ, ನಿಮಗೆ ಸಮೀಪದ ಚಾರ್ಟರ್ಡ್ ಅಕೌಂಟೆಂಟ್ ಬಳಿ ತಿಳಿಸಿ. I.T. Return ತುಂಬಿರಿ. ಈ ರೀತಿ ಮಾಡಿ ಮುಂದೆ ನಿವೇಶನ ಕೊಳ್ಳಿರಿ ಅಲ್ಲಿವರೆಗೆ ಆರ್.ಡಿ. ಮಾಡಿ ಉಳಿತಾಯ ಮಾಡುತ್ತಾ ಬನ್ನಿ.

***
ಹೆಸರು ಬೇಡ, ಭದ್ರಾವತಿ

ನಾನು 4 ಎಕರೆ ಜಮೀನನ್ನು ₹ 80 ಲಕ್ಷಕ್ಕೆ ಮಾರಾಟ ಮಾಡಿರುತ್ತೇನೆ. ಈ ಹಣ ನಾನು, ನನ್ನ ಹೆಂಡತಿ, ಮಕ್ಕಳ ಹೆಸರಿನಲ್ಲಿ ಇಡಬಹುದೇ ತಿಳಿಸಿರಿ. ಜಮೀನು ಕೊಳ್ಳುವವರು ₹ 20 ಲಕ್ಷ ನಗದು, ₹ 60 ಲಕ್ಷ ಚೆಕ್ ಕೊಡುತ್ತಾರೆ. ನಿಮ್ಮ ಸಲಹೆ ಏನು?

ಉತ್ತರ: ಜಮೀನು ಮಾರಾಟ ಮಾಡಿ ಬಂದ ಹಣದಿಂದ ನೀವು, ನಿಮ್ಮ ಹೆಂಡತಿ ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಬಹುದು. ಜಮೀನು ಕೃಷಿ ಜಮೀನಾದರೂ ಭದ್ರಾವತಿಯಿಂದ 8 ಕಿ.ಮೀ. ಒಳಗಿರುವಲ್ಲಿ Capital Gain Tax ಬರುತ್ತದೆ. ಜಮೀನು ಅಥವಾ ಯಾವುದೇ ಸ್ಥಿರ, ಚರ ಆಸ್ತಿ ಮೌಲ್ಯ ₹ 50,000 ದಾಟಿದಲ್ಲಿ ಪ್ಯಾನ್‌ಕಾರ್ಡ್‌ ಸಲ್ಲಿಸಬೇಕು ಹಾಗೂ ಚೆಕ್, ಡಿ.ಡಿ. ಮೂಲಕವೇ ಪಡೆಯಬೇಕು. ನಗದಾಗಿ ಪಡೆಯುವ ₹ 20 ಲಕ್ಷ ಕಪ್ಪು ಹಣವಾಗುತ್ತದೆ. ಮುಂದೆ ಎಲ್ಲಿಂದ ಬಂತು ಎಂದು ಆದಾಯ ತೆರಿಗೆಯವರು ಕೇಳಿದಲ್ಲಿ ತೊಂದರೆಯಾಗುತ್ತದೆ.

***
ಪವನ್.ಕೆ., ಬೆಂಗಳೂರು

ICICI, TATA LIFE ವಿಮಾ ಕಂಪನಿಗಳಲ್ಲಿ ವಿಮೆ ಇಳಿಸಬಹುದೇ. ಮುಂದೆ ಈ ಕಂಪನಿಗಳು ಒಂದಾಗುವ ಸಂಭವವಿದೆಯೇ, ತೊಂದರೆ ಇಲ್ಲವೇ, ತಿಳಿಸಿರಿ.

ಉತ್ತರ: ನನಗೆ ತಿಳಿದಂತೆ ICICI, TATA LIFE ಎರಡೂ ಸದೃಢವಾದ ಜೀವ ವಿಮಾ ಕಂಪನಿಗಳು. ಇಲ್ಲಿ ವಿಮೆ ಮಾಡಿಸುವುದರಿಂದ ಏನೂ ತೊಂದರೆ ಆಗಲಿಕ್ಕಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಮುಂದೇನಾಗಬಹುದು ಎನ್ನುವುದನ್ನು ಯಾವುದೇ ಪರಿಣತರೂ ಹೇಳಲು ಸಾಧ್ಯವಿಲ್ಲ. ಖಾಸಗಿ ವಿಮಾ ಕಂಪನಿಗಳನ್ನು ಕೇಂದ್ರ ಸರ್ಕಾರ ಹಾಗೂ Insurance Regulavity Act  ನಿಯಂತ್ರಿಸುತ್ತವೆ. ಇದಕ್ಕೂ ಹೆಚ್ಚಿನ ವಿಚಾರ ನಮಗೆ ತಿಳಿಯಲು ಸಾಧ್ಯವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !