ಮಲಬಾರ್ ಗೋಲ್ಡ್‌ಗೆ ಕೋರ್ಟ್‌ನಲ್ಲಿ ಗೆಲುವು

ಬುಧವಾರ, ಮಾರ್ಚ್ 27, 2019
26 °C

ಮಲಬಾರ್ ಗೋಲ್ಡ್‌ಗೆ ಕೋರ್ಟ್‌ನಲ್ಲಿ ಗೆಲುವು

Published:
Updated:

ಕೋಯಿಕ್ಕೋಡ್‌: ದೃಶ್ಯಾವಳಿ ತಿರುಚಿ ಮಲಬಾರ್‌ ಗೋಲ್ಡ್‌ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಸ್ಥಳೀಯ ಕೋರ್ಟ್‌ ದೆಹಲಿಯ ಟೆಲಿವಿಷನ್‌ ಚಾನೆಲ್‌ ಸುದರ್ಶನ್ ಟಿವಿಗೆ ದಂಡ ವಿಧಿಸಿದೆ.

ಮಲಬಾರ್‌ ಗೋಲ್ಡ್‌ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪರಿಹಾರ ಮತ್ತು ಕೋರ್ಟ್‌ ವೆಚ್ಚದ ರೂಪದಲ್ಲಿ ಚಾನೆಲ್‌ಗೆ ₹ 50 ಲಕ್ಷ ದಂಡ ವಿಧಿಸಲಾಗಿದೆ.

ದುಬೈನ ಹಣಕಾಸು ಸೇವಾ ಸಂಸ್ಥೆಯು 2016ರಲ್ಲಿ ಏರ್ಪಡಿಸಿದ್ದ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ತಿರುಚಿ ಮಲಬಾರ್‌ ಗೋಲ್ಡ್‌ಗೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಟೆಲಿವಿಷನ್‌ ಚಾನೆಲ್‌ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಮಲಬಾರ್‌ ಗೋಲ್ಡ್‌ ಸಂಸ್ಥೆಯು  ಪಾಕಿಸ್ತಾನದ ಸಮಾರಂಭವನ್ನು ಚೆನ್ನೈನಲ್ಲಿ ಆಯೋಜಿಸಿದ ರೀತಿಯಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿತ್ತು.

ಸಂಸ್ಥೆ ಮತ್ತು ಪ್ರವರ್ತಕರ ವರ್ಚಸ್ಸಿಗೆ ಧಕ್ಕೆ ತರುವ ದುರುದ್ದೇಶದಿಂದ, ಸಂಸ್ಥೆಯ ಪ್ರತಿಸ್ಪರ್ಧಿಗಳ ಕುಮ್ಮಕ್ಕಿನಿಂದ ಈ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿತ್ತು. ಸಂಸ್ಥೆ ಮತ್ತು ನಿರ್ದೇಶಕ ಎಂ. ಪಿ. ಅಹಮ್ಮದ್‌ ಅವರ ಪರವಾಗಿ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು ಎಂದು ಮಲಬಾರ್‌ ಗೋಲ್ಡ್‌ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !