ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ

Published 7 ಅಕ್ಟೋಬರ್ 2023, 12:49 IST
Last Updated 7 ಅಕ್ಟೋಬರ್ 2023, 12:49 IST
ಅಕ್ಷರ ಗಾತ್ರ

ಬೆಂಗಳೂರು: ಅಮೆಜಾನ್‌ ಕಂಪನಿಯ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ (ಜಿಐಎಫ್‌) ಮಾರಾಟ ಮೇಳವು ಅಕ್ಟೋಬರ್‌ 8ರಿಂದ ಆರಂಭ ಆಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯತ್ವ ಪಡೆದಿರುವವರು 24 ಗಂಟೆ ಮುಂಚಿತವಾಗಿಯೇ ಖರೀದಿ ಆರಂಭಿಸಬಹುದಾಗಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ. ನೇಮಕಗೊಂಡವರು ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತ, ಲಖನೌ ಮತ್ತು ಚೆನ್ನೈ ಇತರೆ ನಗರಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಹೊಸದಾಗಿ ನೇಮಕಗೊಂಡವರು ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಆರ್ಡರ್‌ಗಳನ್ನು ತೆಗೆದುಕೊಳ್ಳುವುದು, ಉತ್ಪನ್ನಗಳನ್ನು ಮನೆಬಾಗಿಲಿಗೆ ರವಾನಿಸುವ ಕೆಲಸ ಮಾಡಲಿದ್ದಾರೆ.

ದೇಶದಾದ್ಯಂತ ಕನ್ನಡ, ತೆಲುಗು, ತಮಿಳು ಸೇರಿದಂತೆ ಒಟ್ಟು 8 ಭಾಷೆಗಳಲ್ಲಿ ಗ್ರಾಹಕರು ಶಾಪಿಂಗ್‌ ನಡೆಸಬಹುದು. ಎಸ್‌ಬಿಐ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್ ಬಳಕೆಗೆ ಶೇ 10ರಷ್ಟು ರಿಯಾಯಿತಿ ಸಿಗಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT