ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಸೇವಾ ಶುಲ್ಕ ಹೆಚ್ಚಳ ಅನಿವಾರ್ಯ ಎಂದ ಕ್ರಿಸಿಲ್

Last Updated 4 ನವೆಂಬರ್ 2020, 16:26 IST
ಅಕ್ಷರ ಗಾತ್ರ

ಮುಂಬೈ: ಮೊಬೈಲ್‌ ದೂರಸಂಪರ್ಕ ಕಂಪನಿಗಳು ಸುಸ್ಥಿರ ನೆಲೆ ಕಂಡುಕೊಳ್ಳಬೇಕು ಎಂದಾದರೆ ಮುಂದಿನ ಒಂದು ವರ್ಷದಲ್ಲಿ ಪ್ರತಿ ಗ್ರಾಹಕನಿಂದ ಬರುವ ಸರಾಸರಿ ಆದಾಯವನ್ನು (ಎಆರ್‌ಪಿಯು) ಕನಿಷ್ಠ ಶೇಕಡ 25ರಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಹೇಳಿದೆ. ಎಆರ್‌ಪಿಯು ಹೆಚ್ಚಿಸಿಕೊಳ್ಳಲು ಕಂಪನಿಗಳು ಮುಂದಾದರೆ ಮೊಬೈಲ್‌ ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಆಗಲಿದೆ.

ಈಗಿನ ಪರಿಸ್ಥಿತಿಯಲ್ಲಿ ದೂರಸಂಪರ್ಕ ಕಂಪನಿಗಳು ಬಂಡವಾಳಕ್ಕೆ ಪ್ರತಿಯಾಗಿ ತೀರಾ ಕಡಿಮೆ ಪ್ರಮಾಣದ ಆದಾಯ ಗಳಿಸುತ್ತಿವೆ ಎಂದೂ ಕ್ರಿಸಿಲ್ ಅಭಿಪ್ರಾಯ ವ್ಯಕ್ತಪಡಿಸಿದೆ.

ದೂರಸಂಪರ್ಕ ಸೇವೆಗಳ ಶುಲ್ಕ ಕಡೆಯ ಬಾರಿ ಹೆಚ್ಚಳ ಆಗಿದ್ದು 2019ರ ಡಿಸೆಂಬರ್‌ನಲ್ಲಿ. ಈಗ ಮತ್ತೆ ಸೇವಾ ಶುಲ್ಕ ಹೆಚ್ಚಿಸುವುದಷ್ಟೇ ಅಲ್ಲದೆ, 4ಜಿ ಸೇವೆಗಳನ್ನು ಬಳಸುವ ಗ್ರಾಹಕರ ಸಂಖ್ಯೆಯನ್ನು ಕಂಪನಿಗಳು ಹೆಚ್ಚಿಸಿಕೊಳ್ಳಬೇಕಿದೆ. ಎಆರ್‌ಪಿಯು ಹೆಚ್ಚಳದ ಮೂಲಕ ಮಾತ್ರ ಕಂಪನಿಗಳು 5ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಸಾಧ್ಯ ಎಂದು ಅದು ಹೇಳಿದೆ.

ಕಳೆದ ಮೂರು ವರ್ಷಗಳಲ್ಲಿ ಕಂಡುಬಂದ ತೀವ್ರ ಸ್ಪರ್ಧೆ, 4ಜಿ ನೆಟ್‌ವರ್ಕ್‌ ಆರಂಭಕ್ಕಾಗಿ ಮಾಡಿದ ಭಾರಿ ಪ್ರಮಾಣದ ಬಂಡವಾಳ ವೆಚ್ಚ ಹಾಗೂ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್) ಪಾವತಿ ಬಾಕಿ ಇರುವ ಕಾರಣ ಕಂಪನಿಗಳ ಆರ್ಥಿಕ ಸಾಮರ್ಥ್ಯ ಕುಗ್ಗಿದೆ ಎಂದು ಕ್ರಿಸಿಲ್‌ ವರದಿಯಲ್ಲಿ ಹೇಳಿದೆ.

ಎಜಿಆರ್ ಮೊತ್ತವಾದ ₹ 1.15 ಲಕ್ಷ ಕೋಟಿಯನ್ನು ಪಾವತಿ ಮಾಡಿದಾಗ, ಡಿಸೆಂಬರ್‌ನಲ್ಲಿ ಮಾಡಿದ್ದ ಶುಲ್ಕ ಹೆಚ್ಚಳವು ಕಂಪನಿಗಳಿಗೆ ಯಾವ ಪ್ರಯೋಜನಕ್ಕೂ ಬಾರದಂತೆ ಆಗುತ್ತದೆ ಎಂಬುದು ಕ್ರಿಸಿಲ್ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT