ಟೋಕಿಯೊ: ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಿದರೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ ಬೆನ್ನಲ್ಲೇ, ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದೆಂಬ ಕಳವಳದಿಂದಾಗಿ ಇಳಿಕೆಯಾಗಿದ್ದ ಕಚ್ಚಾ ತೈಲದ ಬೆಲೆ ಬುಧವಾರ ಏರಿಕೆಯಾಗಿದೆ. 5 ವಾರಗಳ ಕನಿಷ್ಠದಿಂದ ಬೆಲೆಗಳು ಚೇತರಿಕೆ ಕಂಡಿವೆ.
.ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ತೈಲ ದರ 29 ಸೆಂಟ್ಗಳು ಅಥವಾ ಶೇ 0.4ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ $ 67.93 ತಲುಪಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ಕಚ್ಚಾ ತೈಲ ಇಷ್ಟೇ ಪ್ರಮಾಣದಲ್ಲಿ ಏರಿಕೆ ಕಂಡು ಬ್ಯಾರೆಲ್ಗೆ $65.44ಗೆ ತಲುಪಿದೆ.

ಮಂಗಳವಾರ ಎರಡೂ ಕಚ್ಚಾ ತೈಲಗಳ ಬೆಲೆಗಳು $1ಗೂ ಅಧಿಕ ಇಳಿಕೆ ಕಂಡು, ಐದು ವಾರಗಳ ಕನಿಷ್ಠಕ್ಕೆ ಇಳಿದಿತ್ತು.
.ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿ: ಕಚ್ಚಾ ತೈಲ ದರ ಶೇ 8ರಷ್ಟು ಏರಿಕೆ.
‘ಟ್ರಂಪ್ ಬೆದರಿಕೆಯಿಂದಾಗಿ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಕಡಿಮೆ ಮಾಡುತ್ತಿದೆಯೇ ಎನ್ನುವುದನ್ನು ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ಹೀಗಾದಲ್ಲಿ ಇದು ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ನಿಜವಾಗಿಯೂ ಹೀಗಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ’ ಎಂದು ನೊಮುರಾ ಸೆಕ್ಯೂರಿಟೀಸ್ನಲ್ಲಿ ಅರ್ಥಶಾಸ್ತ್ರಜ್ಞ ಯುಕಿ ತಕಾಶಿಮ ಅಭಿಪ್ರಾಯಪಟ್ಟಿದ್ದಾರೆ.

‘ಒಂದು ವೇಳೆ ಭಾರತದ ಆಮದು ಸ್ಥಿರವಾಗಿದ್ದರೆ, ಡಬ್ಲ್ಯುಟಿಐ ದರ ಈ ತಿಂಗಳಲ್ಲಿ $60 ರಿಂದ $70ರ ನಡುವೆ ಇರಬಹುದು’ ಎಂದು ಅವರು ಅಂದಾಜಿಸಿದ್ದಾರೆ.
.ದೀರ್ಘಾವಧಿಯ ಗುತ್ತಿಗೆ: ರಷ್ಯಾದಿಂದ ಕಚ್ಚಾ ತೈಲ ಖರೀದಿ ಮುಂದುವರಿಕೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.