ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ–ಮಾರ್ಟ್‌ ಲಾಭ ಶೇ 9ರಷ್ಟು ಇಳಿಕೆ

Published 14 ಅಕ್ಟೋಬರ್ 2023, 10:43 IST
Last Updated 14 ಅಕ್ಟೋಬರ್ 2023, 10:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಡಿ–ಮಾರ್ಟ್‌ ಮಳಿಗೆಗಳನ್ನು ನಿಯಂತ್ರಿಸುತ್ತಿರುವ ಅವೆನ್ಯು ಸೂಪರ್‌ಮಾರ್ಟ್ಸ್‌ ಕಂಪನಿಯ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 9.09ರಷ್ಟು ಇಳಿಕೆ ಕಂಡಿದ್ದು ₹623 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹685 ಕೋಟಿಯಷ್ಟು ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಸರಕು ಮತ್ತು ಬಟ್ಟೆ ವಹಿವಾಟು ಇಳಿಕೆ ಕಂಡಿರುವುದೇ ಲಾಭ ಕಡಿಮೆ ಆಗಲು ಕಾರಣ ಎಂದು ಹೇಳಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಾರ್ಯಾಚರಣಾ ವರಮಾನವು ಶೇ 18.66ರಷ್ಟು ಹೆಚ್ಚಾಗಿ ₹12,624 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಾರ್ಯಾಚರಣಾ ವರಮಾನ ₹10,638 ಕೋಟಿ ಇತ್ತು.

ಕಂಪನಿಯ ಒಟ್ಟು ವೆಚ್ಚವು ಶೇ 18.97ರಷ್ಟು ಹೆಚ್ಚಾಗಿ ₹11,809 ಕೋಟಿಗೆ ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದ ಆರು ತಿಂಗಳಿನಲ್ಲಿ ಕಾರ್ಯಾಚರಣಾ ವರಮಾನ ₹24,489 ಕೋಟಿಗೆ ಮತ್ತು ನಿವ್ವಳ ಲಾಭ ವರಮಾನ ₹1,282 ಕೋಟಿಯಷ್ಟು ಆಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT