ಭಾನುವಾರ, ಡಿಸೆಂಬರ್ 6, 2020
22 °C

ಡೇಟಾ: ಕನಿಷ್ಠ ಶುಲ್ಕ ನಿಗದಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಡೇಟಾ ಸೇವೆಗಳಿಗೆ ಕನಿಷ್ಠ ದರ ನಿಗದಿ ಮಾಡುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ದೂರಸಂಪರ್ಕ ಕಂಪನಿಗಳು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು (ಟ್ರಾಯ್‌) ಒತ್ತಾಯಿಸಿವೆ.

ಟ್ರಾಯ್‌ನ ಹೊಸ ಅಧ್ಯಕ್ಷ ಪಿ.ಡಿ. ವಘೇಲಾ ಜೊತೆ ನಡೆದ ಸಭೆಯಲ್ಲಿ ಕಂಪನಿಗಳು ಈ ಒತ್ತಾಯ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಡೇಟಾ ಸೇವೆಗಳ ಕನಿಷ್ಠ ಶುಲ್ಕವು ಟ್ರಾಯ್‌ ಮೂಲಕವೇ ನಿಗದಿ ಆಗಬೇಕು ಎಂಬುದು ದೂರಸಂಪರ್ಕ ಉದ್ಯಮದ ಆಗ್ರಹ. ಈ ವಿಚಾರವಾಗಿ ಸಮಾಲೋಚನೆಯ ಪ್ರಕ್ರಿಯೆಯನ್ನು ಬೇಗನೆ ನಡೆಸಬೇಕು, ನಿಯಮಗಳನ್ನು ಜಾರಿಗೆ ತರಬೇಕು ಎಂದು ಅವು ಮನವಿ ಮಾಡಿವೆ.

ವಘೇಲಾ ಜೊತೆ ಈ ಮಾತುಕತೆ ನಡೆದಿರುವುದನ್ನು ದೂರಸಂಪರ್ಕ ಕಂಪನಿಗಳ ಒಕ್ಕೂಟವಾದ ‘ಸಿಒಎಐ’ ಮಹಾನಿರ್ದೇಶಕ ಎಸ್‌.ಪಿ. ಕೊಚ್ಚರ್ ಖಚಿತಪಡಿಸಿದ್ದಾರೆ. ಒಂದು ತಿಂಗಳಿಗೆ ₹ 160 ಪಾವತಿಸಿ 16 ಜಿ.ಬಿ. ಡೇಟಾ ಪಡೆಯುತ್ತಿರುವುದು ದುರಂತವೇ ಸರಿ ಎಂದು ಭಾರ್ತಿ ಏರ್‌ಟೆಲ್‌ ಕಂಪನಿಯ ಅಧ್ಯಕ್ಷ ಸುನಿಲ್‌ ಭಾರ್ತಿ ಮಿತ್ತಲ್ ಕೆಲವು ತಿಂಗಳುಗಳ ಹಿಂದೆ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು