ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಷಣ್ ಸ್ಟೀಲ್‌ನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹3,800 ಕೋಟಿ ವಂಚನೆ

Last Updated 8 ಜುಲೈ 2019, 5:18 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚಿಸಿದ ಪ್ರಕರಣ ಇತ್ಯರ್ಥಗೊಳ್ಳುವ ಮೊದಲೇ ಭೂಷಣ್‌ ಸ್ಟೀಲ್‌ ಉಕ್ಕು ಕಂಪನಿಯು ₹3,805.15 ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ಗೆ ನೀಡಿದ ಲಿಖಿತ ಮಾಹಿತಿ ನೀಡಿರುವ ಬ್ಯಾಂಕ್‌,ಚಂಡೀಗಢ ಶಾಖೆಯಿಂದ₹3,191.51 ಕೋಟಿ, ದುಬೈ ಶಾಖೆಯಿಂದ ₹345.74 ಕೋಟಿ, ಹಾಂಕಾಂಗ್‌ ಶಾಖೆಯಿಂದ ₹267.9 ಕೋಟಿಯನ್ನು ಕಂಪನಿ ಪಡೆದುಕೊಂಡಿದೆ ಎಂದು ವಿವರಿಸಿದೆ.

‘ಭೂಷಣ್‌ ಕಂಪನಿ ಬ್ಯಾಂಕ್‌ನ ಹಣವನ್ನು ದುರುಪಯೋಗಪಡಿಸಿಕೊಂಡಿದೆ, ತನ್ನ ಲೆಕ್ಕಪತ್ರಗಳಲ್ಲಿ ವಂಚನೆ ಮಾಡಿಬ್ಯಾಂಕ್‌ ಒಕ್ಕೂಟದಿಂದಹಣ ಪಡೆದಿದೆ’ ಎಂದು ಪಿಎನ್‌ಬಿ ತಿಳಿಸಿದೆ.

ಬ್ಯಾಂಕ್‌ ಆಡಿಟ್, ಸಿಬಿಐ ದಾಖಲಿಸಿದ ಎಫ್ಐಆರ್‌ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್‌ ಶಿಫಾರಸು ಮಾಡಿದೆ. ಸದ್ಯ ಪ್ರಕರಣ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿದೆ (ಎನ್‌ಸಿಎಲ್‌ಟಿ) ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT