ಶುಕ್ರವಾರ, ಅಕ್ಟೋಬರ್ 30, 2020
26 °C

ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಶನಿವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆ ಮಾಡಿವೆ. ಪೆಟ್ರೋಲ್‌ ದರದಲ್ಲಿ ಇಳಿಕೆ ಮಾಡುತ್ತಿರುವುದು ಆರು ತಿಂಗಳಲ್ಲಿ ಇದು ಎರಡನೇ ಬಾರಿಯಾಗಿದೆ.

ದೆಹಲಿಯಲ್ಲಿ ಡೀಸೆಲ್‌ ಪೆಟ್ರೋಲ್‌ ದರ 12 ಪೈಸೆ ಇಳಿಕೆಯಾಗಿ ₹ 72.93ರಂತೆ ಮಾರಾಟವಾಯಿತು. ಪೆಟ್ರೋಲ್‌ ದರ 13 ಪೈಸೆ ಕಡಿಮೆಯಾಗಿ ₹ 81.86ಕ್ಕೆ ತಲುಪಿತು. ಸೆ. 3ರಿಂದ 12ರವರೆಗಿನ ಅವಧಿಯಲ್ಲಿ ಡೀಸೆಲ್‌ ದರ ಒಂದು ಲೀಟರಿಗೆ 63 ಪೈಸೆ ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 14 ಪೈಸೆ ಕಡಿಮೆ ಆಗಿದ್ದು, 84.52ರಂತೆ ಹಾಗೂ ಡೀಸೆಲ್‌ ದರ 12 ಪೈಸೆ ಕಡಿಮೆಯಾಗಿ ₹ 77.22ರಂತೆ ಮಾರಾಟವಾಗಿದೆ.

ದೇಶದಾದ್ಯಂತ ಜೂನ್‌ 7 ರಿಂದ ಜುಲೈ 25ರವರೆಗಿನ ಅವಧಿಯಲ್ಲಿ ಡೀಸೆಲ್‌ ದರ ಪ್ರತಿ ಲೀಟರಿಗೆ ₹ 12.55 ರಷ್ಟು ಏರಿಕೆ ಮಾಡಲಾಗಿತ್ತು. ‍ಪೆಟ್ರೋಲ್‌ ದರ ಜೂನ್‌ 7 ರಿಂದ ಜೂನ್‌ 29ರ ಅವಧಿಯಲ್ಲಿ ಲೀಟರಿಗೆ ₹ 9.17ರಷ್ಟು ಹೆಚ್ಚಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು