ಡಾಲರ್ ಇಂಡಸ್ಟ್ರೀಸ್‌ಗೆ ಲಾಭ

ಬೆಂಗಳೂರು: ಡಾಲರ್ ಇಂಡಸ್ಟ್ರೀಸ್ ಕಂಪನಿಯು ತನ್ನ ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಕಂಪನಿಯು ₹ 41.24 ಕೋಟಿ ಲಾಭ ಗಳಿಸಿದೆ.
ಕಂಪನಿಯ ಕಾರ್ಯಾಚರಣೆ ಆದಾಯವು ₹ 390 ಕೋಟಿ ಆಗಿದೆ ಎಂದು ಪ್ರಕಟಣೆ ತಿಳಿಸಿದೆ. ‘ಅಕ್ಟೋಬರ್ ತಿಂಗಳಿನಲ್ಲಿ ನಾವು ನಮ್ಮ ಕಂಪನಿಯ ಮೊದಲ ಮಳಿಗೆಯನ್ನು ಅಯೋಧ್ಯೆಯಲ್ಲಿ ಆರಂಭಿಸಿದ್ದೇವೆ. ಇದೇ ಮಾದರಿಯಲ್ಲಿ ದೇಶದ ಎಲ್ಲ ಕಡೆ ಮಳಿಗೆ ಆರಂಭಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕುಮಾರ ಗುಪ್ತ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.