ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಔಷಧ ಉದ್ಯಮ ಶೇ 3–5ರಷ್ಟು ಪ್ರಗತಿ ನಿರೀಕ್ಷೆ

Last Updated 10 ಜೂನ್ 2020, 21:32 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಔಷಧ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 3–5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ (ಇಂಡ್‌–ರೇ) ಹೇಳಿದೆ.

ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಚಿಕಿತ್ಸೆಯ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. ಔಷಧ ವಲಯದ ಕಂಪನಿಗಳು ಬಂಡವಾಳ ಸಂಗ್ರಹಿಸಲು ವಿವಿಧ ಮೂಲಗಳನ್ನು ಹೊಂದಿವೆ. ಹೀಗಾಗಿ ಲಾಕ್‌ಡೌನ್‌ ಪರಿಣಾಮಗಳಿಂದ ಹೊರಬರಲಿದೆ ಎಂದೂ ಹೇಳಿದೆ.

ಬೇರೆ ವಲಯಗಳಿಗೆ ಹೋಲಿಸಿದರೆ, ಔಷಧ ವಲಯವು ಕೋವಿಡ್‌–19ಯಿಂದ ಕಡಿಮೆ ಬಾಧಿತವಾಗಿದೆ. ಅಗತ್ಯ ಸೇವೆಗಳ ವ್ಯಾಪ್ತಿಗೆ ಬರುವುದರಿಂದ ಜತೆಗೆ ಲಾಕ್‌ಡೌನ್‌ ನಿಯಮಗಳಿಂದ ವಿನಾಯಿತಿ ದೊರೆತಿರುವುದರಿಂದಲೂ ಹೆಚ್ಚಿನ ಪರಿಣಾಮ ಆಗಿಲ್ಲ.

ಲಾಕ್‌ಡೌನ್‌ ಕಟ್ಟುನಿಟ್ಟಾಗಿದ್ದ ಕಾರಣ ಏಪ್ರಿಲ್‌ನಲ್ಲಿ ತಯಾರಿಕೆ ಪ್ರಮಾಣ ಶೇ 50–60ರಷ್ಟು ಇಳಿಕೆ ಕಂಡಿತ್ತು. ಮೇ–ಜೂನ್‌ ಅವಧಿಯಲ್ಲಿ ಶೇ 60–80ರಷ್ಟು ಸುಧಾರಣೆ ಕಂಡಿದೆ. ಆದರೆ, ಪರಿಣಾಮಕಾರಿಯಾದ ಮಾರುಕಟ್ಟೆ ಪ್ರಚಾರ ಸಾಧ್ಯವಿಲ್ಲದೇ ಇರುವುದರಿಂದ ಕಂಪನಿಗಳು ಯಾವುದೇ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿಲ್ಲ.

ಬೆಲೆ ಏರಿಕೆ ಸಾಧ್ಯತೆ:ಔಷಧ ಬೆಲೆ ನಿಯಂತ್ರಣ ಆದೇಶ ಕಾಯ್ದೆ' (ಡಿಪಿಸಿಒ) ವ್ಯಾಪ್ತಿಗೆ ಬಾರದ ಉತ್ಪನ್ನಗಳ ಬೆಲೆಯನ್ನು ಕಂಪನಿಗಳು ಶೇ 8ರವರೆಗೂ ಹೆಚ್ಚಿಸುವ ಸಾಧ್ಯತೆ ಇದೆ. ಕಚ್ಚಾ ಸಾಮಗ್ರಿಗಳ ದರ ಹೆಚ್ಚಳವಷ್ಟೇ ಅಲ್ಲದೆ ಸಾಗಣೆ ಮತ್ತು ಕೆಲಸಗಾರರ ಮೇಲಿನ ಹೆಚ್ಚುವರಿ ವೆಚ್ಚವೂ ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಸದ್ಯ ಸರಾಸರಿ ಬೆಲೆ ಏರಿಕೆಯು ಶೇ 5ರಷ್ಟಿದ್ದು ಗರಿಷ್ಠ ಶೇ 10ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT