ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿಗೆ ಆನ್‌ಲೈನ್‌, ಖರೀದಿಗೆ ಆಫ್‌ಲೈನ್‌!

Last Updated 16 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯರು ಸರಕುಗಳ ಖರೀದಿಗೆ ಆನ್‌ಲೈನ್‌ನಲ್ಲಿ ಮಾಹಿತಿಗೆ ತಡಕಾಡಿದರೂ, ಖರೀದಿಗೆ ಮಾತ್ರ ಅಂಗಡಿ, ಷಾಪಿಂಗ್‌ ಮಾಲ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ ಎಂದು ವಿಶ್ವಬ್ಯಾಂಕ್‌ನ ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ನಡೆಯುವ ಒಟ್ಟಾರೆ ರಿಟೇಲ್ ಮಾರಾಟಕ್ಕೆ ಹೋಲಿಸಿದರೆ, ಆನ್‌ಲೈನ್‌ (ಇ–ಕಾಮರ್ಸ್‌) ತಾಣಗಳಲ್ಲಿನ ಖರೀದಿ ಪ್ರಮಾಣವು ಕೇವಲ ಶೇ 1.6ರಷ್ಟಿದೆ. ಚೀನಾದಲ್ಲಿ ಈ ಪ್ರಮಾಣ ಶೇ 15ರಷ್ಟಿದ್ದರೆ, ಜಾಗತಿಕ ಪ್ರಮಾಣವು ಶೇ 14ರಷ್ಟಿದೆ.

ಸರಕನ್ನು ಮುಟ್ಟಿ ನೋಡಿ ಅದರ ಗುಣಮಟ್ಟವನ್ನು ಸ್ವತಃ ಪರೀಕ್ಷಿಸಿದ ನಂತರವೇ ಖರೀದಿಸುವ ಬಗ್ಗೆ ಭಾರತೀಯರಲ್ಲಿ ಹೆಚ್ಚಿನ ಒಲವು ಇರುವುದೇ ಇದಕ್ಕೆ ಕಾರಣ ಎಂದು ವಿಶ್ವಬ್ಯಾಂಕ್‌ನ ದಕ್ಷಿಣ ಏಷ್ಯಾದಲ್ಲಿನ ಇ–ಕಾಮರ್ಸ್‌ ಕುರಿತ ವರದಿಯಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ ವಹಿವಾಟಿನಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸುವ ಮೂಲಕ ಈ ಅಂತರ ಕಡಿಮೆ ಮಾಡಬಹುದಾಗಿದೆ ಎಂದು ವಿಶ್ವಬ್ಯಾಂಕ್‌ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT