ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕಾ ವಲಯದ ಚೇತರಿಕೆ: ಆರ್ಥಿಕ ತಜ್ಞರ ಅನುಮಾನ

Last Updated 28 ನವೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತದ ಪ್ರಮಾಣ ಇಳಿಕೆ ಆಗಿದೆ ಎನ್ನುವ ವರದಿ ಹೊರಬಿದ್ದಿರುವ ಬೆನ್ನಲ್ಲೇ ತಯಾರಿಕಾ ವಲಯವು ಸಕಾರಾತ್ಮಕ ಹಾದಿಗೆ ಮರಳುತ್ತಿದೆ ಎನ್ನುವ ಅಂಶದ ಬಗ್ಗೆ ಆರ್ಥಿಕ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ಉತ್ಪಾದನೆ ಮತ್ತು ಇತರೆ ಅಂಕಿ–ಅಂಶಗಳು ನಕಾರಾತ್ಮಕ ಮಟ್ಟದಲ್ಲಿ ಇರುವುದು ಅವರ ಅನುಮಾನಕ್ಕೆ ಕಾರಣವಾಗಿದೆ.

‘ಲಾಕ್‌ಡೌನ್‌ನಿಂದಾಗಿ ತಯಾರಿಕಾ ವಲಯವು ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿತ್ತು. ಹೀಗಿರುವಾಗ ಎರಡನೇ ತ್ರೈಮಾಸಿಕದಲ್ಲಿ ತಯಾರಿಕಾ ವಲಯವು ಸಕಾರಾತ್ಮಕ ಬೆಳವಣಿಗೆ ಕಂಡಿದೆ ಎನ್ನುವುದು ಚಕಿತಗೊಳಿಸಿದೆ. ಈ ವಲಯವು ಹೇಗೆ ಚೇತರಿಸಿಕೊಂಡಿತು ಎನ್ನುವುದೇ ಒಗಟಾಗಿದೆ’ ಎಂದು ಎಸ್‌ಬಿಐನ ಸಂಶೋಧನಾ ವರದಿ ಇಕೊರ್‍ಯಾಪ್ ಮುಖ್ಯ ಆರ್ಥಿಕ ಸಲಹೆಗಾರರ ಸೌಮ್ಯಕಾಂತಿ ಘೋಷ್‌ ಬರೆದಿದ್ದಾರೆ.

‘ಕಂಪನಿಗಳು ಮತ್ತು ಉದ್ಯಮಗಳ ಸಿಬ್ಬಂದಿ ಮೇಲಿನ ವೆಚ್ಚದಲ್ಲಿ ಇಳಿಕೆ ಆಗಿದೆ. ಈ ಕಾರಣಕ್ಕಾಗಿ ಐಐಪಿ ತಯಾರಿಕೆಯು ಶೇ 6.7ರಷ್ಟು ಇಳಿಕೆ ಕಂಡಿದ್ದು, ತಯಾರಿಕಾ ವಲಯದ ಸರಾಸರಿ ಮೌಲ್ಯವು ಶೇ 0.6ರಷ್ಟು ಏರಿಕೆಯಾಗಿದೆ. ₹ 500 ಕೋಟಿ ಮೊತ್ತದವರೆಗಿನ ವಹಿವಾಟು ನಡೆಸುವ ಕಂಪನಿಗಳು ವೆಚ್ಚ ತಗ್ಗಿಸುವುದರತ್ತ ಗಮನ ಹರಿಸಿವೆ. ಸಿಬ್ಬಂದಿ ಮೇಲೆ ಮಾಡುವ ವೆಚ್ಚವನ್ನು ಶೇ 10–12ರಷ್ಟು ಕಡಿತ ಮಾಡಿವೆ. ಇದು ಭವಿಷ್ಯದಲ್ಲಿ ಉಪಭೋಗದಲ್ಲಿ ಇಳಿಕೆಗೆ ಕಾರಣವಾಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಉಪಭೋಗ ಬೇಡಿಕೆ ಮತ್ತು ಹೂಡಿಕೆಯು ಮಂದಗತಿಯಲ್ಲಿಯೇ ಸಾಗಲಿದ್ದು, ಸದ್ಯದ ಮಟ್ಟಿಗೆ ಗಮನಾರ್ಹವಾದ ಸುಧಾರಣೆ ಕಾಣುವುದಿಲ್ಲ ಎಂದು ಕೇರ್‌ ರೇಟಿಂಗ್ಸ್‌ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT