ಶನಿವಾರ, ಜೂಲೈ 4, 2020
28 °C

ಮೂಲಸೌಕರ್ಯದ ಬೆಳವಣಿಗೆ ಕುಂಠಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಮೇನಲ್ಲಿ ಶೇ 23.4ರಷ್ಟು ಕುಸಿತ ಕಂಡಿದೆ. 

2019ರ ಮೇನಲ್ಲಿ ಶೇ 3.8ರಷ್ಟು ಬೆಳವಣಿಗೆ ಕಂಡಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ರಸಗೊಬ್ಬರ ತಯಾರಿಕೆ ಹೊರತುಪಡಿಸಿ ಉಳಿದೆಲ್ಲಾ ವಲಯಗಳ ಬೆಳವಣಿಗೆಯು ನಕಾರಾತ್ಮಕ ಮಟ್ಟದಲ್ಲಿದೆ.

2020–21ರ ಏಪ್ರಿಲ್‌–ಮೇ ಅವಧಿಯಲ್ಲಿ ಈ ವಲಯದ ಬೆಳವಣಿಗೆ ಶೇ 30ರಷ್ಟು ಕುಸಿತ ಕಂಡಿದೆ. 2019–20ರ ಇದೇ ಅವಧಿಯಲ್ಲಿ ಶೇ 4.5ರಷ್ಟು ಬೆಳವಣಿಗೆ ಕಂಡಿತ್ತು.

ಏಪ್ರಿಲ್‌ ಮತ್ತು ಮೇನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಕಲ್ಲಿದ್ದಲು, ಸಿಮೆಂಟ್‌, ಉಕ್ಕು, ನೈಸರ್ಗಿಕ ಅನಿಲ, ತೈಲ ಸಂಸ್ಕರಣಾಗಾರ, ಕಚ್ಚಾತೈಲ  ವಲಯಗಳು ಉತ್ಪಾದನಾ ನಷ್ಟ ಅನುಭವಿಸಿವೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಲಯಗಳು ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 40.27ರಷ್ಟು ಕೊಡುಗೆ ನೀಡುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು