ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಪಿಎಫ್‌ಒ ಆದಾಯ 17.39ರಷ್ಟು ಏರಿಕೆ

Published 10 ಫೆಬ್ರುವರಿ 2024, 15:18 IST
Last Updated 10 ಫೆಬ್ರುವರಿ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಆದಾಯದಲ್ಲಿ ಶೇ 17.39ರಷ್ಟು ಏರಿಕೆಯಾಗಿದೆ.

ಒಟ್ಟು ಮೂಲಧನದಲ್ಲಿ ಶೇ 17.97ರಷ್ಟು ಹೆಚ್ಚಳವಾಗಿದೆ. ಇದು ಉತ್ತಮ ಆರ್ಥಿಕ ಸಾಧನೆಯಾಗಿದ್ದು, ಚಂದಾದಾರರಿಗೆ ಒಳ್ಳೆಯ ಲಾಭ ಕೂಡ ಲಭಿಸುತ್ತಿದೆ ಎಂದು ಇಪಿಎಫ್‌ಒ ಹೇಳಿದೆ.

2020-21ನೇ ಸಾಲಿನಡಿ ಶೇ 8.50ರಷ್ಟು ಬಡ್ಡಿದರ ನಿಗದಿಪಡಿಸಿದ್ದ ಸಂಘಟನೆಯು, 2021–22ನೇ ಸಾಲಿಗೆ ಶೇ 8.10ರಷ್ಟು ಬಡ್ಡಿದರ ಪ್ರಕಟಿಸಿತ್ತು. ಇದು ನಾಲ್ಕು ದಶಕದ ಕನಿಷ್ಠ ಮಟ್ಟವಾಗಿತ್ತು. 

ಇಪಿಎಫ್‌ಒದಲ್ಲಿ ₹13 ಲಕ್ಷ ಕೋಟಿ ಮೂಲಧನ ಇದೆ. ಇದರಲ್ಲಿ 2023–24ನೇ ಸಾಲಿಗೆ ₹1.07 ಲಕ್ಷ ಕೋಟಿ ಮೊತ್ತವನ್ನು ನೌಕರರ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗಳಿಗೆ ಪಾವತಿಸಲು ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಶಿಫಾರಸು ಮಾಡಿದೆ.

2022–23ರಲ್ಲಿ ₹11.02 ಲಕ್ಷ ಕೋಟಿ ಮೂಲಧನ ಇತ್ತು. ಇದರಲ್ಲಿ ಚಂದಾದಾರರ ಖಾತೆಗಳಿಗೆ ₹91,151.55 ಕೋಟಿ ಪಾವತಿಗೆ ಶಿಫಾರಸು ಮಾಡಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ದಾಖಲೆಯ ಮೊತ್ತ ಪಾವತಿಗೆ ಅನುಮೋದನೆ ನೀಡಿದೆ ಎಂದು ವಿವರಿಸಿದೆ. 

ಮಾರುಕಟ್ಟೆಯಲ್ಲಿರುವ ಇತರೆ ಹೂಡಿಕೆ ಮಾರ್ಗಗಳಲ್ಲಿ ಲಭಿಸುವ ಬಡ್ಡಿದರಕ್ಕೆ ಹೋಲಿಸಿದರೆ ಇಪಿಎಫ್‌ಒದಲ್ಲಿ ಬಡ್ಡಿದರ ಹೆಚ್ಚಿದೆ. ಇದರಿಂದ ಚಂದಾದಾರರಿಗೂ ಹೆಚ್ಚಿನ ಪ್ರಯೋಜನ ಸಿಗುತ್ತಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT