ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2024–25ರಲ್ಲಿ ದ್ವಿಚಕ್ರ ವಾಹನ ಉದ್ಯಮ ಹೆಚ್ಚಿನ ಪ್ರಗತಿ: ನಿರಂಜನ್ ಗುಪ್ತಾ

Published 18 ಫೆಬ್ರುವರಿ 2024, 15:07 IST
Last Updated 18 ಫೆಬ್ರುವರಿ 2024, 15:07 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯ ದ್ವಿಚಕ್ರ ವಾಹನ ಉದ್ಯಮವು ಈಗಿರುವುದಕ್ಕಿಂತಲೂ 2024–25ರ ಹಣಕಾಸು ವರ್ಷದಲ್ಲಿ ಹೆಚ್ಚಿನ ಪ್ರಗತಿ ಕಾಣಲಿದೆ ಎಂದು ಹೀರೊ ಮೋಟೊಕಾರ್ಪ್‌ ಸಿಇಒ ನಿರಂಜನ್ ಗುಪ್ತಾ ಹೇಳಿದ್ದಾರೆ.

ಪ್ರೀಮಿಯಂ ಮಾದರಿಗಳ ಬೇಡಿಕೆಯು ಮತ್ತಷ್ಟು ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆಯು ಸುಧಾರಿಸುತ್ತಿದ್ದು, ಮುಂದಿನ ತ್ರೈಮಾಸಿಕಗಳಲ್ಲಿ ಮಾರಾಟದಲ್ಲಿ ಬೆಳವಣಿಗೆ ಆಗಲಿದೆ. ಮಾರಾಟವನ್ನು ಹೆಚ್ಚಿಸಲು ದೇಶದಲ್ಲಿ ಕಂಪನಿಯ ಡೀಲರ್‌ಶಿಪ್‌ ಮತ್ತು ನವೀಕರಿಸಿದ ಮಾರಾಟ ಮಳಿಗೆಗಳನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಹೇಳಿದರು.

ಕಂಪನಿಯು 2023–24ರ ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ₹10,031 ಕೋಟಿ ವರಮಾನ ಗಳಿಸಿತ್ತು. ಹೀರೊ ಮೋಟೊಕಾರ್ಪ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರೀಮಿಯಾ ಹೆಸರಿನಲ್ಲಿ ಪ್ರೀಮಿಯಂ ವಾಹನಗಳಿಗಾಗಿಯೇ ವಿಶೇಷ ಶೋರೂಂ ಅನ್ನು ತೆರೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT