ಬುಧವಾರ, ಏಪ್ರಿಲ್ 14, 2021
31 °C

ಕಂಪ್ಯೂಟರ್ ಸಾಫ್ಟ್‌ವೇರ್‌, ಹಾರ್ಡ್‌ವೇರ್ ವಲಯ: ಎಫ್‌ಡಿಐ ನಾಲ್ಕು ಪಟ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ವಲಯವು 2020–21ರ ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ₹ 1.78 ಲಕ್ಷ ಕೋಟಿ ಮೌಲ್ಯದ ಎಫ್‌ಡಿಐ ಆಕರ್ಷಿಸಿದೆ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ತಿಳಿಸಿದೆ.

2019–20ರ ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ₹ 46,720 ಕೋಟಿ ಎಫ್‌ಡಿಐ ಹರಿದುಬಂದಿತ್ತು. ಇದಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಏರಿಕೆಯಾಗಿದೆ ಎಂದು ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ವಲಯಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಾಗಿವೆ.

ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಡಿಜಿಟಲ್‌ ಸ್ಥಿತ್ಯಂತರ ಪ್ರಕ್ರಿಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಭಾರತದ ತಂತ್ರಜ್ಞಾನ ಕಂಪನಿಗಳು ಅದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಿವೆ ಎಂದು ಸಿಂಘಿ ಅಡ್ವೈಸರ್ಸ್‌ನ ಪಾಲುದಾರ ಬಿಮಲ್‌ ರಾಜ್‌ ಹೇಳಿದ್ದಾರೆ.

ನಿರ್ಮಾಣ ಚಟುವಟಿಕೆ ಮತ್ತು ಔಷಧ ವಲಯಗಳಲ್ಲಿಯೂ ಎಫ್‌ಡಿಐ ಒಳಹರಿವು ಹೆಚ್ಚಾಗಿದೆ. ದೂರಸಂಪರ್ಕ, ವಾಹನೋದ್ಯಮ ವಲಯಗಳಲ್ಲಿ ಎಫ್‌ಡಿಐ ಒಳಹರಿವು ಇಳಿಕೆ ಕಂಡುಬಂದಿದೆ.

ಐ.ಟಿ, ದೂರಸಂಪರ್ಕ, ಔಷಧ ಮತ್ತು ಎಲೆಕ್ಟ್ರಾನಿಕ್ಸ್‌ ಮ್ಯಾನುಫ್ಯಾಕ್ಚರಿಂಗ್ ವಲಯಗಳು ಹೆಚ್ಚಿನ ಎಫ್‌ಡಿಐ ಆಕರ್ಷಿಸುವ ಸಾಮರ್ಥ್ಯ ಹೊಂದಿವೆ ಎಂದು ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್‌ ಆ್ಯಂಡ್ ಕೋನ ಪಾಲುದಾರ ಅರವಿಂದ್ ಶರ್ಮಾ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು