ರೈತರ ಖಾತೆಗೆ ರಸಗೊಬ್ಬರ ಸಬ್ಸಿಡಿ ವ್ಯವಸ್ಥೆಗೆ ಸಿದ್ಧತೆ

ಶುಕ್ರವಾರ, ಜೂಲೈ 19, 2019
26 °C

ರೈತರ ಖಾತೆಗೆ ರಸಗೊಬ್ಬರ ಸಬ್ಸಿಡಿ ವ್ಯವಸ್ಥೆಗೆ ಸಿದ್ಧತೆ

Published:
Updated:
Prajavani

ನವದೆಹಲಿ: ರಸಗೊಬ್ಬರ ಸಬ್ಸಿಡಿಯನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾಯಿಸಲು (ಡಿಬಿಟಿ) ಅನುಕೂಲ ಆಗುವಂತಹ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಲಾಯಿತು.

2017ರ ಅಕ್ಟೋಬರ್‌ನಲ್ಲಿ ಮೊದಲ ಹಂತದಲ್ಲಿ ಸಬ್ಸಿಡಿ ಮೊತ್ತವನ್ನು ಕಂಪನಿಗಳಿಗೆ ವರ್ಗಾಯಿಸಲಾಗುತ್ತಿತ್ತು. ಎರಡನೇ ಹಂತದಲ್ಲಿ, ಸಬ್ಸಿಡಿ ಮೊತ್ತ ರೈತರ ಖಾತೆಗಳಿಗೆ ವರ್ಗಾವಣೆಯಾಗಲಿದೆ.

ಹೊಸ ತಂತ್ರಜ್ಞಾನ: ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಸಗೊಬ್ಬರ ಪೂರೈಕೆ ಮತ್ತು ಲಭ್ಯತೆಯ ಮಾಹಿತಿ ನೀಡಲು ಡ್ಯಾಷ್‌ಬೋರ್ಡ್‌ ಬಿಡುಗಡೆ ಮಾಡಲಾಗಿದೆ. ಸುಧಾರಿತ ಪಾಯಿಂಟ್‌ ಆಫ್ ಸೇಲ್‌ (ಪಿಒಎಸ್‌) ಸಾಫ್ಟ್‌ವೇರ್‌ ಮತ್ತು ಡೆಸ್ಕ್‌ಟಾಪ್‌ ಪಿಒಎಸ್‌ ವರ್ಷನ್‌ ಅಭಿವೃದ್ಧಿಪಡಿಸಲಾಗಿದೆ.

‘ಡಿಬಿಟಿಯಿಂದ ರಸಗೊಬ್ಬರ ವಲಯದಲ್ಲಿ ಪಾರದರ್ಶಕತೆ ಮೂಡಲಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !