ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ರವರೆಗೆ ‘ಫೇಮ್‌–2’ ವಿಸ್ತರಣೆ: ಕೇಂದ್ರ ಸರ್ಕಾರಕ್ಕೆ 'ಫಿಕ್ಕಿ ಒತ್ತಾಯ

Last Updated 2 ಜುಲೈ 2020, 12:11 IST
ಅಕ್ಷರ ಗಾತ್ರ

ಮುಂಬೈ:ವಿದ್ಯುತ್‌ ಚಾಲಿತ (ಇವಿ) ವಾಹನಗಳಿಗೆ ಉತ್ತೇಜನ ನೀಡುವ ‘ಫೇಮ್‌–2’ ಯೋಜನೆಯನ್ನು 2025ರವರೆಗೆ ವಿಸ್ತರಿಸುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಫಿಕ್ಕಿ) ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ.

ಕೋವಿಡ್‌ನಿಂದಾಗಿ ದೇಶದ ‘ಇವಿ’ ವಲಯದ ಬೇಡಿಕೆ ಮತ್ತು ಹೂಡಿಕೆಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಕೇಂದ್ರ ಸರ್ಕಾರದ ಉದ್ದೇಶಿತ ಗುರಿ ಸಾಧನೆಗಾಗಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಸಲಹೆ ನೀಡಿದೆ.

ಹೈಬ್ರಿಡ್‌ ಮತ್ತು ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಮತ್ತು ಅಳವಡಿಕೆ ತ್ವರಿತಗೊಳಿಸುವ (ಎಫ್‌ಎಎಂಇ) ಎರಡನೇ ಯೋಜನೆಯನ್ನು ವಿಸ್ತರಿಸುವ ಅಗತ್ಯ ಇದೆ. ವಿದ್ಯುತ್‌ ಚಾಲಿತ ವಾಹನ ವಲಯದ ಬೆಳವಣಿಗೆಗೆ ಸಂಬಂಧಿಸಿದ ಕೆಲವು ಶಿಫಾರಸುಗಳನ್ನು ಜಾರಿಗೊಳಿಸುವಂತೆ ನೀತಿ ಆಯೋಗ, ಭಾರಿ ಉದ್ಯಮ ಇಲಾಖೆ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ’ಫಿಕ್ಕಿ’ ಒತ್ತಾಯಿಸಿದೆ.

‘ಇವಿ’ಗಳತ್ತ ಗ್ರಾಹಕರು ಆಕರ್ಷಿತರಾಗುವಂತೆ ಮಾಡುವುದು ಹಾಗೂ ಹೂಡಿಕೆಯನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಒತ್ತಾಯಿಸಿದೆ.

ಕೆಲವು ಶಿಫಾರಸುಗಳು

* ವಿದ್ಯುತ್‌ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸಬ್ಸಿಡಿ ಬೆಂಬಲ ವಿಸ್ತರಣೆ

* ರಿಟೇಲ್‌ ಸಾಲ ಒದಗಿಸಲು ಆದ್ಯತಾ ವಲಯವನ್ನಾಗಿ ಪರಿಗಣನೆ

* ಇ–ಬಸ್‌ ಬಳಕೆಗೆ ಉತ್ತೇಜನ

* ಸಂಶೋಧನೆ ಹಾಗೂ ಅಭಿವೃದ್ಧಿಯ ಮೂಲಸೌಕರ್ಯಗಳ ಹೆಚ್ಚಳ

* ‘ಇವಿ’ ದ್ವಿಚಕ್ರ ವಾಹನಗಳಿಗೆ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT