ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪಿಎಸ್‌ಗೆ ಪರ್ಯಾಯ ಅರಸಿ: ರಘುರಾಮ್ ರಾಜನ್ ಸಲಹೆ

Last Updated 6 ಮಾರ್ಚ್ 2023, 16:26 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ರಾಜ್ಯಗಳು ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ಮತ್ತೆ ಜಾರಿಗೆ ತರುವ ತೀರ್ಮಾನ ಕೈಗೊಂಡಿರುವ ಬಗ್ಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪಿಂಚಣಿ ವಿಚಾರವಾಗಿ ಇರುವ ಬೇಡಿಕೆಗಳ ಈಡೇರಿಕೆಗೆ, ಕಡಿಮೆ ವೆಚ್ಚದ ಬದಲಿ ಮಾರ್ಗಗಳನ್ನು ಅರಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

‘ರಾಜ್ಯ ಸರ್ಕಾರಗಳು ತಮ್ಮ ಹಣಕಾಸಿನ ಮೇಲೆ ದೀರ್ಘಾವಧಿಯಲ್ಲಿ ಆಗುವ ಪರಿಣಾಮಗಳ ಬಗ್ಗೆ ಆಲೋಚಿಸಬೇಕು. ತಾನು ಕಾಳಜಿ ವಹಿಸಬೇಕಾದ ವರ್ಗಗಳ ಪೈಕಿ, ಸರ್ಕಾರಿ ನೌಕರ ವರ್ಗಕ್ಕೆ ಅತ್ಯಂತ ಹೆಚ್ಚಿನ ನೆರವು ಬೇಕೇ ಎಂಬುದನ್ನೂ ಪರಿಶೀಲಿಸಬೇಕು’ ಎಂದು ರಾಜನ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈಚೆಗೆ ಕೆಲವು ವರ್ಗಗಳಿಗೆ ಸೇರಿದ ಸರ್ಕಾರಿ ನೌಕರರಿಗೆ, ಒಪಿಎಸ್ ವ್ಯವಸ್ಥೆಗೆ ಮರಳುವ ಆಯ್ಕೆ ನೀಡಲು ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT