ಬದಲಾಗದ ಕನಿಷ್ಠ ಹೂಡಿಕೆ ಮಾನದಂಡ

ಶನಿವಾರ, ಏಪ್ರಿಲ್ 20, 2019
27 °C

ಬದಲಾಗದ ಕನಿಷ್ಠ ಹೂಡಿಕೆ ಮಾನದಂಡ

Published:
Updated:

ನವದೆಹಲಿ: ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ‘ಫಿಚ್’, ಭಾರತಕ್ಕೆ ನೀಡಿರುವ ಕನಿಷ್ಠ ಹೂಡಿಕೆ ಮಾನದಂಡವನ್ನು (ಬಿಬಿಬಿ ಮೈನಸ್‌) ಸತತ 13ನೇ ವರ್ಷದಲ್ಲಿಯೂ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ.

ವಿತ್ತೀಯ ಕೊರತೆ ಹೆಚ್ಚುತ್ತಿರುವ ಕಾರಣ ನೀಡಿ, ಕನಿಷ್ಠ ಹೂಡಿಕೆ ಮಾನದಂಡದಲ್ಲಿ ಬದಲಾವಣೆ ಮಾಡಲು ನಿರಾಕರಿಸಿದೆ. ಆದರೆ, ಈ ಸ್ಥಾನಮಾನದ ಮುನ್ನೋಟ ಸ್ಥಿರವಾಗಿರಲಿದೆ ಎಂದು ಹೇಳಿದೆ.

ಈ ಹಿಂದೆ 2006ರ ಆಗಸ್ಟ್‌ 1 ರಂದು ಭಾರತಕ್ಕೆ ನೀಡಿದ್ದ ‘ಬಿಬಿ ಪ್ಲಸ್‌’ ಸ್ಥಾನವನ್ನು ಸ್ಥಿರ ಮುನ್ನೋಟದೊಂದಿಗೆ ’ಬಿಬಿಬಿ ಮೈನಸ್‌’ಗೆ ಬದಲಾಯಿಸಿತ್ತು. ಆ ಬಳಿಕ ಯಾವುದೇ ಬದಲಾವಣೆ ಮಾಡಿಲ್ಲ.

ದುರ್ಬಲ ವಿತ್ತೀಯ ಸ್ಥಿತಿಯು ಭಾರತದ ಸ್ಥಾನಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಮುಂದೆ ಅಧಿಕಾರಕ್ಕೆ ಬರಲಿರುವ ಸರ್ಕಾರದ ಮಧ್ಯಮಾವಧಿಯ ವಿತ್ತೀಯ ನೀತಿಯು ರೇಟಿಂಗ್ಸ್‌ ಮೇಲೆ ಪ್ರಭಾವ ಬೀರಲಿದೆ. ದೇಶದ ಆರ್ಥಿಕತೆ, ಪ್ರಸಕ್ತ ಹಣಕಾಸು ವರ್ಷಕ್ಕೆ ಶೇ 6.8ರಷ್ಟು ಮತ್ತು ಮುಂದಿನ ಹಣಕಾಸು ವರ್ಷಕ್ಕೆ ಶೇ 7.1ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !