ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರು ಬೆಲೆ ಇಳಿಕೆ

Last Updated 11 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆ ಸೂಚ್ಯಂಕವು ಏರುಮುಖವಾಗಿದ್ದರೂ ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳಲ್ಲಿ 5 ಬ್ಯಾಂಕ್‌ಗಳ ಷೇರುಗಳು ಅವುಗಳ ಮುಖಬೆಲೆಗೆ ಸಮನಾಗಿ ಅಥವಾ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ವಹಿವಾಟು ನಡೆಸುತ್ತಿವೆ ಎಂದು ಮಾರುಕಟ್ಟೆಯ ವಿಶ್ಲೇಷಕರು ಹೇಳಿದ್ದಾರೆ.

ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ನ ಒಂದು ಷೇರಿನ ಮುಖ ಬೆಲೆ ₹ 10 ಇದೆ. ಆದರೆ, ಇಎಸ್‌ಇನಲ್ಲಿ ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಷೇರಿನ ಬೆಲೆ ₹ 9.27ರಷ್ಟಾಗಿತ್ತು. ಅಂದು ಸಂವೇದಿ ಸೂಚ್ಯಂಕ 40,509 ಅಂಶಗಳಿಗೆ ತಲುಪಿತ್ತು.

ಅದೇ ರೀತಿ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಯುಕೊ ಬ್ಯಾಂಕ್‌, ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದ ಷೇರುಗಳ ಬೆಲೆಯೂ ಅವುಗಳ ಮುಖಬೆಲೆಗೆ (₹10) ಹತ್ತಿರದಲ್ಲಿಯೇ ವಹಿವಾಟು ನಡೆಸಿವೆ.

ಪಂಜಾಬ್‌ ಆ್ಯಂಡ್ ಸಿಂದ್‌ ಬ್ಯಾಂಕ್‌ನ ಷೇರಿನ ಮುಖಬೆಲೆ ₹ 10 ಇದೆ. ಶುಕ್ರವಾರದ ವಹಿವಾಟಿನಲ್ಲಿ ಒಂದು ಷೇರಿನ ಬೆಲೆ ₹10.81ರಷ್ಟು ಇತ್ತು. ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಷೇರು ಬೆಲೆ ₹ 12.45ರಷ್ಟಿತ್ತು. ಇನ್ನು ಯುಕೊ ಬ್ಯಾಂಕ್‌ನ ಷೇರು ಬೆಲೆಯು ₹ 12.14ರಷ್ಟಿತ್ತು.

‘ಕೆಲವು ತಿಂಗಳುಗಳಿಂದ ಷೇರುಪೇಟೆಯಲ್ಲಿ ಗುರುತರವಾದ ಚೇತರಿಕೆ ಕಂಡುಬಂದಿದೆ. ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರುಗಳು ಚೇತರಿಸಿಕೊಳ್ಳಲು ಕಷ್ಟಪಡುತ್ತಿವೆ. ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕ್‌ಗಳ ಷೇರುಗಳು 52 ವಾರಗಳ ಕನಿಷ್ಠ ಮಟ್ಟದ ಆಸುಪಾಸಿನಲ್ಲಿಯೇ ಇವೆ’ ಎಂದು ರೆಲಿಗೇರ್‌ ಬ್ರೋಕಿಂಗ್‌ ಲಿಮಿಟೆಡ್‌ನ ಸಿಒಒ ಗುರುಪ್ರೀತ್‌ ಸಿದನ ಅವರು ಹೇಳಿದ್ದಾರೆ.

‘ಬ್ಯಾಂಕ್‌ಗಳ ಆಸ್ತಿ ಗುಣಮಟ್ಟದ ಬಗ್ಗೆ ಎದುರಾಗಿರುವ ಆತಂಕ, ಸಾಲ ನೀಡಿಕೆ ಪ್ರಮಾಣ ಕಡಿಮೆ ಆಗಿರುವುದು ಸೇರಿದಂತೆ ಇನ್ನೂ ಹಲವು ಅಂಶಗಳಿಂದಾಗಿ ಷೇರುಗಳ ಬೆಲೆ ಇಳಿಮುಖವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಬಹುತೇಕ ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲು ಶೇ 90ರಷ್ಟಿದೆ. ಈ ಕಾರಣಕ್ಕಾಗಿಯೂ ಹೂಡಿಕೆದಾರರು ಇವುಗಳ ಬಗ್ಗೆ ಕಡಿಮೆ ಆಸಕ್ತಿ ಹೊಂದಿದ್ದಾರೆ ಎಂದೂ ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಪಾಲು (ಜೂನ್‌ 30ರ ಅಂತ್ಯಕ್ಕೆ)

ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌; 95.85%

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ; 93.33%

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ; 92.39%

ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌; 83.06

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT