ಶನಿವಾರ, ಮೇ 21, 2022
25 °C

ಫೋಬ್ಸ್‌ ಪತ್ರಿಕೆಯ ಶ್ರೀಮಂತರ ಪಟ್ಟಿ: ಅಂಬಾನಿ ನಂಬರ್‌ 1, ಅದಾನಿಗೆ ಎರಡನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೋಬ್ಸ್‌ ಪತ್ರಿಕೆಯು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಎರಡನೆಯ ಸ್ಥಾನದಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಇದ್ದಾರೆ.

ಹಿಂದಿನ ವರ್ಷದಲ್ಲಿ ಭಾರತದಲ್ಲಿನ ಶತಕೋಟ್ಯಧೀಶರ ಸಂಖ್ಯೆಯು 140 ಆಗಿತ್ತು. ಈಗ ಅದು 166ಕ್ಕೆ ಏರಿಕೆ ಆಗಿದೆ. ದೇಶದ ಐ.ಟಿ. ವಲಯದ ಆದಾಯವು ದಾಖಲೆಯ ಮಟ್ಟಕ್ಕೆ ಏರಿಕೆ ಆದ ಹೊತ್ತಿನಲ್ಲಿಯೇ ಐ.ಟಿ. ಉದ್ಯಮಿ ಶಿವ ನಾಡಾರ್ ಅವರ ಸಂಪತ್ತು ಮೌಲ್ಯವು ಶೇ 22ರಷ್ಟು ಹೆಚ್ಚಳ ಕಂಡಿದೆ ಎಂದು ಫೋಬ್ಸ್‌ ವರದಿ ಹೇಳಿದೆ.

ಸೈರಸ್ ಪೂನಾವಾಲಾ ಮಾಲೀಕತ್ವದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ದಾಖಲೆಯ ಆದಾಯ ಕಂಡಿದೆ. ಇದರಿಂದಾಗಿ ಪೂನಾವಾಲಾ ಅವರ ಸಂಪತ್ತು ಮೌಲ್ಯವು ಸರಿಸುಮಾರು ಎರಡು ಪಟ್ಟು ಹೆಚ್ಚಾಗಿದ್ದು, ಶ್ರೀಮಂತರ ಪಟ್ಟಿಯಲ್ಲಿ ಅವರು ನಾಲ್ಕು ಸ್ಥಾನಕ್ಕೆ ಮೇಲಕ್ಕೆ ಬಂದಿದ್ದಾರೆ. ಈ ಬಾರಿಯ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ ಅವರು ಸ್ಥಾನ ಪಡೆದಿದ್ದಾರೆ ಎಂದು ಫೋಬ್ಸ್‌ ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು