ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಜುಲೈ 26ಕ್ಕೆ ಕೊನೆಗೊಂಡ ವಾರದಲ್ಲಿ ₹ 5,016 ಕೋಟಿ ಕಡಿಮೆಯಾಗಿ ₹ 29.60 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ಅದಕ್ಕೂ ಹಿಂದಿನ ವಾರ ₹ 10,833 ಕೋಟಿ ಹೆಚ್ಚಾಗಿ ₹ 29.67 ಲಕ್ಷ ಕೋಟಿಗೆ ತಲುಪಿತ್ತು ಎಂದು ಆರ್ಬಿಐ ಮಾಹಿತಿ ನೀಡಿದೆ.
ವಿದೇಶಿ ಕರೆನ್ಸಿಗಳ ಸಂಗ್ರಹ ₹ 11,730 ಕೋಟಿ ಕಡಿಮೆಯಾಗಿ ₹ 27.53 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದರಿಂದಾಗಿ ಒಟ್ಟಾರೆ ವಿದೇಶಿ ವಿನಿಮಯ ಸಂಗ್ರಹ ಕಡಿಮೆಯಾಗಿದೆ ಎಂದು ತಿಳಿಸಿದೆ.
ಚಿನ್ನದ ಮೀಸಲು ಸಂಗ್ರಹ ₹ 7,038 ಕೋಟಿ ಹೆಚ್ಚಾಗಿ ₹ 1.75 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಭಾರತದ ಕರೆನ್ಸಿ ಸಂಗ್ರಹವು ₹ 109 ಕೋಟಿ ಕಡಿಮೆಯಾಗಿ ₹ 24,150 ಕೋಟಿಗೆ ತಲುಪಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.