ಶನಿವಾರ, ಜನವರಿ 16, 2021
19 °C

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಪೇಟೆಯಲ್ಲಿ ₹ 21,235 ಕೋಟಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂರು ತಿಂಗಳವರೆಗೆ ಮಾರಾಟಕ್ಕೆ ಆದ್ಯತೆ ನೀಡಿದ್ದ ವಿದೇಶಿ ಹೂಡಿಕೆದಾರರು  (ಎಫ್‌ಪಿಐ), ಜೂನ್‌ನಲ್ಲಿ ಷೇರುಪೇಟೆಯಲ್ಲಿ ₹ 21,235 ಕೋಟಿ ಮೊತ್ತದ ಬಂಡವಾಳ ತೊಡಗಿಸಿದ್ದಾರೆ.

ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ದೇಶಿ ಆರ್ಥಿಕತೆಯು ನಿಧಾನವಾಗಿ ಚೇತರಿಕೆ ಹಾದಿಗೆ ಮರಳುತ್ತಿದೆ. ನಗದು ಲಭ್ಯತೆ ಹೆಚ್ಚುತ್ತಿದೆ.  ಈ ಕಾರಣಗಳಿಗೆ ’ಎಫ್‌ಪಿಐ’ಗಳ ಹೂಡಿಕೆ ಹೆಚ್ಚಿದೆ. ಜೂನ್‌ 1 ರಿಂದ ಜೂನ್‌ 26ರ ಮಧ್ಯೆ ಒಟ್ಟಾರೆ ₹ 22,893 ಕೋಟಿ ಹೂಡಿಕೆಯಾಗಿದೆ. ₹ 1,658 ಕೋಟಿ ವಾಪಸ್‌ ಪಡೆಯಲಾಗಿದೆ.

ವಿದೇಶಿ ಹೂಡಿಕೆದಾರರು ಮಾರ್ಚ್‌ನಲ್ಲಿ ₹ 1.1 ಲಕ್ಷ ಕೋಟಿ, ಏಪ್ರಿಲ್‌ನಲ್ಲಿ ₹ 15,403 ಕೋಟಿ ಮತ್ತು ಮೇನಲ್ಲಿ ₹ 7,366 ಕೋಟಿ ವಾಪಸ್‌ ಪಡೆದಿದ್ದರು.

‘ಎಫ್‌ಪಿಐ‘ಗಳು ಇತ್ತೀಚೆಗೆ ಸ್ಮಾಲ್‌ ಮತ್ತು ಮಿಡ್‌ಕ್ಯಾಪ್‌ ಷೇರುಗಳಲ್ಲಿ ಹೆಚ್ಚು ಹಣ ತೊಡಗಿಸುತ್ತಿವೆ’ ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.