ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಶತಕದತ್ತ ಪೆಟ್ರೋಲ್ ಬೆಲೆ, ಮುಂಬೈಯಲ್ಲಿ ₹105.58

Last Updated 4 ಜುಲೈ 2021, 7:01 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಒಸಿಎಲ್) ಹೊರಡಿಸಿರುವ ತಾಜಾ ಮಾಹಿತಿಯ ಪ್ರಕಾರ, ಈ ತಿಂಗಳು ಇಂಧನ ಬೆಲೆಗಳಲ್ಲಿ ಮೂರನೇ ಬಾರಿಗೆ ಭಾನುವಾರದಂದು ಹೆಚ್ಚಳಗೊಂಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್‌ಗೆ ಪ್ರತಿ ಲೀಟ್‌ಗೆ 35 ಪೈಸೆ ಹಾಗೂ ಡೀಸಲ್‌ಗೆ ಲೀಟರ್‌ಗೆ 18 ಪೈಸೆ ಏರಿಕೆಯಾಗಿದೆ.

ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಶತಕದ ಗಡಿಯತ್ತ ತಲುಪಿದ್ದು, ಪ್ರತಿ ಲೀಟರ್‌ಗೆ ₹99.51 ಆಗಿದೆ. ಹಾಗೆಯೇ ಡೀಸೆಲ್‌ ಪ್ರತಿ ಲೀಟರ್ ಬೆಲೆ ₹89.36ಕ್ಕೆ ತಲುಪಿದೆ.

ಮುಂಬೈಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 34 ಪೈಸೆ ಹೆಚ್ಚಳ ಕಂಡುಬಂದು ಪ್ರತಿ ಲೀಟರ್‌ಗೆ ₹105.58 ತಲುಪಿದೆ. ಡೀಸೆಲ್ ಬೆಲೆ 19 ಪೈಸೆ ಏರಿಕೆಗೊಂಡು ಲೀಟರ್‌ಗೆ ₹96.91 ಆಗಿದೆ.

ಚೆನ್ನೈಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ಬೆಲೆಯಲ್ಲಿ ಅನುಕ್ರಮವಾಗಿ 31 ಹಾಗೂ 19 ಪೈಸೆ ಹೆಚ್ಚಳಗೊಂಡಿವೆ. ಅಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ಬೆಲೆ ಅನುಕ್ರಮವಾಗಿ ಲೀಟರ್‌ಗೆ ₹100.44 ಹಾಗೂ ₹93.91 ತಲುಪಿದೆ.

ಕೋಲ್ಕತ್ತದಲ್ಲೂ ಪೆಟ್ರೋಲ್ ಬೆಲೆ 100ರ ಸನಿಹದಲ್ಲಿದ್ದು, ಲೀಟರ್‌ಗೆ ₹99.45 ಮತ್ತು ಡೀಸೆಲ್‌ಗೆ ₹92.27 ತಲುಪಿದೆ.

ಬೆಂಗಳೂರು ಸೇರಿದಂತೆ ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಪುಣೆ ನಗರಗಳಲ್ಲಿ ಪೆಟ್ರೋಲ್ ಬೆಲೆ ₹100 ದಾಟಿದೆ.

ಪೆಟ್ರೋಲ್ ಬೆಲೆ ಲೀಟರ್‌ಗೆ ₹100 ದಾಟಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು:
ಕರ್ನಾಟಕ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್ ಮತ್ತು ಲಡಾಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT