ಮಂಗಳವಾರ, ಜನವರಿ 31, 2023
19 °C

ಫೋಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ ಅದಾನಿ, ನಾಡರ್, ಸೂಟ

ಪಿಟಿಐ Updated:

ಅಕ್ಷರ ಗಾತ್ರ : | |

ಸಿಂಗಪುರ: ಫೋಬ್ಸ್ ಏಷ್ಯಾ ಸಿದ್ಧಪಡಿಸಿರುವ ದಾನಿಗಳ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ಶಿವ ನಾಡರ್ ಮತ್ತು ಅಶೋಕ್ ಸೂಟ ಸ್ಥಾನ ಪಡೆದಿದ್ದಾರೆ. ಭಾರತ ಮೂಲದ ಮಲೇಷ್ಯಾ ಉದ್ಯಮಿ ಬ್ರಹ್ಮಲ್ ವಾಸುದೇವನ್ ಮತ್ತು ಅವರ ಪತ್ನಿ ಶಾಂತಿ ಕಂದಯ್ಯ ಅವರೂ ಈ ಪಟ್ಟಿಯಲ್ಲಿ ಇದ್ದಾರೆ.

ಏಷ್ಯಾ–ಪ್ಯಾಸಿಫಿಕ್ ವಲಯದಲ್ಲಿ ದಾನ ಕಾರ್ಯದಲ್ಲಿ ವೈಯಕ್ತಿಕ ಬದ್ಧತೆಯನ್ನು ತೋರಿಸಿರುವವರ ಹೆಸರನ್ನು ಈ ಪಟ್ಟಿ ಒಳಗೊಂಡಿದೆ ಎಂದು ಫೋಬ್ಸ್ ಪ್ರಕಟಣೆ ತಿಳಿಸಿದೆ.

ಅದಾನಿ ಅವರು ಜೂನ್‌ನಲ್ಲಿ ತಮಗೆ 60 ವರ್ಷ ತುಂಬಿದಾಗ ₹ 60 ಸಾವಿರ ಕೋಟಿಯನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ. ಈ ಘೋಷಣೆಯು ಅವರನ್ನು ಭಾರತದ ಅತಿದೊಡ್ಡ ದಾನಿಗಳ ಪೈಕಿ ಒಬ್ಬರನ್ನಾಗಿಸಿದೆ ಎಂದು ಫೋಬ್ಸ್ ಹೇಳಿದೆ.

ಶಿವ ನಾಡರ್ ಅವರು ತಮ್ಮ ಶಿವ ನಾಡರ್ ಪ್ರತಿಷ್ಠಾನಕ್ಕೆ ಈ ವರ್ಷ ₹ 11,600 ಕೋಟಿ ದಾನ ಮಾಡಿದ್ದಾರೆ. ಅಶೋಕ್ ಸೂಟ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳಿಗಾಗಿ ₹ 600 ಕೋಟಿ ನೀಡುವುದಾಗಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು